ಟೀಂ ಇಂಡಿಯಾ ತಂಡಕ್ಕೆ ಕೇಸರಿ ಬಣ್ಣದ ಜೆರ್ಸಿ: ವಿಪಕ್ಷಗಳ ವಾಗ್ದಾಳಿ

ಬುಧವಾರ, 26 ಜೂನ್ 2019 (18:00 IST)
ಭಾರತೀಯ ಕ್ರಿಕೆಟ್ ತಂಡಕ್ಕೆ ಕೇಸರಿ ಬಣ್ಣದ ಜರ್ಸಿ ಧರಿಸುವ ನಿರ್ಧಾರ ಕುರಿತಂತೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ದೇಶದಲ್ಲಿ ಪ್ರತಿಯೊಂದನ್ನು ಕೇಸರಿಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಆರಂಭಿಕವಾಗಿ ಟೀಂ ಇಂಡಿಯಾ ಆಟಗಾರರ ಜೆರ್ಸಿ ಬಣ್ಣದಲ್ಲಿ ಬದಲಾವಣೆಗೊಳಿಸಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ಆರೋಪಿಸಿದ್ದಾರೆ.
 
ಅಬು ಆಜ್ಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಮುಖಂಡ ಸಚಿವ ಗುಲಾಬ್ ರಾವ್ ಪಾಟೀಲ್, ಟೀಂ ಇಂಡಿಯಾ ತಂಡದ ಕೇಸರಿ ಬಣ್ಣದ ಜೆರ್ಸಿ ಕುರಿತಂತೆ ಅನಗತ್ಯವಾಗಿ ರಾಜಕಾರಣ ಮಾಡಲಾಗುತ್ತಿದೆ. ವಿಪಕ್ಷಗಳಿಗೆ ಮಾಡಲು ಯಾವುದೇ ಕೆಲಸವಿಲ್ಲ. ಆದ್ದರಿಂದ ಇಂತಹ ಆರೋಪಗಳನ್ನು ಮಾಡುತ್ತಿವೆ. ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವಿದೆ. ಅದಕ್ಕೂ ವಿಪಕ್ಷಗಳು ಆರೋಪ ಮಾಡಲು ಸಾಧ್ಯವೆ ಎಂದು ತಿರುಗೇಟು ನೀಡಿದ್ದಾರೆ.
 
ಟೀಂ ಇಂಡಿಯಾ ಆಟಗಾರರು ಹಸಿರು ಬಣ್ಣದ ಜೆರ್ಸಿ ಧರಿಸಲು ಸರಕಾರ ಯಾವುದೇ ನಿರ್ಭಂಧ ವಿಧಿಸಿಲ್ಲ. ಕೇಸರಿ ಬಣ್ಣದ ಜೆರ್ಸಿ ಧರಿಸಲು ಯಾಕೆ ಆಕ್ಷೇಪಣೆ ಮಾಡಲಾಗುತ್ತಿದೆ ಎಂದು ಗುಡುಗಿದ್ದಾರೆ.
 
ದೇಶದಲ್ಲಿ ಕೆಲವರು ಕೇಸರಿ ಭಯೋತ್ಪಾದನೆ ವಿಷಯದ ಬಗ್ಗೆ ಆಕ್ಷೇಪ ಮಾಡುತ್ತಾರೆ. ಇದೀಗ ಟೀಂ ಇಂಡಿಯಾ ಧರಿಸಲಿರುವ ಕೇಸರಿ ಜೆರ್ಸಿ ಬಗ್ಗೆ ಕೆಲವರು ಆಕ್ಷೇಪಣೆ ಮಾಡುತ್ತಿದ್ದಾರೆ ಎಂದು ಶಿವಸೇನೆ ಮುಖಂಡ ಗುಲಾಬ್ ರಾವ್ ಪಾಟೀಲ್ ಲೇವಡಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ