ಪೂಜಾರಾ ಶತಕ, ಅಮಿತ್ ಮಿಶ್ರಾ 59 ರನ್, ಭಾರತ 289ಕ್ಕೆ 8 ವಿಕೆಟ್

ಶನಿವಾರ, 29 ಆಗಸ್ಟ್ 2015 (16:44 IST)
ಕೊಲಂಬೊ: ಚೇತೇಶ್ವರ ಪೂಜಾರಾ ಮತ್ತು ಅಮಿತ್ ಮಿಶ್ರಾ ಅವರ ಉತ್ತಮ ಜತೆಯಾಟದ ನೆರವಿನಿಂದ ಭಾರತ ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ದಾಖಲಿಸುವತ್ತ ದಾಪುಗಾಲು ಹಾಕಿದೆ. ಒಂದು ಹಂತದಲ್ಲಿ ಭಾರತ 119 ರನ್‌ಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಭಾರತದ ಮೊತ್ತ 300 ರ ಗಡಿ ದಾಟುವುದು ಅನುಮಾನವಿತ್ತು.

ಆದರೆ  ಪೂಜಾರಾ ಮತ್ತು ಅಮಿತ್ ಮಿಶ್ರಾ ಅವರ 104 ರನ್ ಜತೆಯಾಟದ ನೆರವಿನಿಂದ ಭಾರತ 8 ವಿಕೆಟ್ ಕಳೆದುಕೊಂಡು 288 ರನ್ ದಾಖಲಿಸಿದ್ದು, 300 ರ ಗಡಿ ಸುಲಭವಾಗಿ ದಾಟಬಹುದೆಂದು ನಿರೀಕ್ಷಿಸಲಾಗಿದೆ.  ಚೇತೇಶ್ವರ ಪೂಜಾರಾ ಅವರು 129 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದು, ಅವರ ಸ್ಕೋರಿನಲ್ಲಿ 13 ಬೌಂಡರಿಗಳಿದ್ದವು.

ಪೂಜಾರಾಗೆ ಉತ್ತಮ ಜತೆಯಾಟ ನೀಡಿದ್ದ ಅಮಿತ್ ಮಿಶ್ರಾ  7 ಬೌಂಡರಿಗಳೊಂದಿಗೆ 59 ರನ್ ಬಾರಿಸಿ ಹೆರಾತ್ ಬೌಲಿಂಗ್‌ನಲ್ಲಿ ಪೆರೇರಾಗೆ ಕ್ಯಾಚಿತ್ತು ಔಟಾದರು. ಪೂಜಾರಾ ಅವರನ್ನು ಗಾಯಗೊಂಡಿದ್ದ ಶಿಖರ್ ಧವನ್ ಬದಲಿಗೆ ಆಡಿಸಲಾಗಿದ್ದು, ಅವರ ಮೇಲೆ ಇಟ್ಟಿದ್ದ ಭರವಸೆ ಹುಸಿಗೊಳಿಸದೇ ಟೀಂ ಇಂಡಿಯಾಗೆ ಕಡೆಯವರೆಗೆ ಆಸರೆಯಾಗಿ ನಿಂತಿದ್ದಾರೆ. 

ವೆಬ್ದುನಿಯಾವನ್ನು ಓದಿ