ಟೀಂ ಇಂಡಿಯಾಕ್ಕೆ ಅಭಿನಂದಿಸುವಾಗ ಎಡವಟ್ಟು ಮಾಡಿ ಟ್ರೋಲ್ ಗೊಳಗಾದ ಪ್ರೀತಿ ಝಿಂಟಾ
ಮಂಗಳವಾರ, 8 ಜನವರಿ 2019 (10:07 IST)
ಮುಂಬೈ: ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಮಾಲಕಿಯೂ ಆದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಟೀಂ ಇಂಡಿಯಾಕ್ಕೆ ಅಭಿನಂದಿಸುವಾಗ ಎಡವಟ್ಟು ಮಾಡಿ ಟ್ರೋಲ್ ಗೊಳಗಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದಿಸುವಾಗ ಪ್ರೀತ ಝಿಂಟಾ ಸರಣಿ ಎನ್ನುವ ಬದಲು ಟೆಸ್ಟ್ ಪಂದ್ಯ ಗೆದ್ದಿದ್ದಕ್ಕೆ ಅಭಿನಂದನೆಗಳು ಎಂದಿದ್ದು ಟ್ವಿಟರಿಗರ ಲೇವಡಿಗೆ ತುತ್ತಾಗಿದೆ.
ಮೇಡಂ ಇದು ಟೆಸ್ಟ್ ಸರಣಿ, ಪಂದ್ಯವಲ್ಲ ಎಂದು ಪ್ರೀತಿ ಝಿಂಟಾರ ತಪ್ಪು ಎತ್ತಿ ತೋರಿಸಿರುವ ಟ್ವಿಟರಿಗರು ಪಂದ್ಯಕ್ಕೂ ಸರಣಿಗೂ ಇರುವ ವ್ಯತ್ಯಾಸ ಗೊತ್ತಿಲ್ಲವೇ ಮೇಡಂ ಎಂದು ವ್ಯಂಗ್ಯ ಮಾಡಿದ್ದಾರೆ. ಮತ್ತೆ ಟೀಂ ಇಂಡಿಯಾ ಆಟಗಾರರನ್ನು ಮೆನ್ ಇನ್ ಬ್ಲೂ ಎಂದಿದ್ದನ್ನೂ ಟ್ವಿಟರಿಗರು ಲೇವಡಿ ಮಾಡಿದ್ದು, ಭಾರತೀಯ ಆಟಗಾರರು ಟೆಸ್ಟ್ ಪಂದ್ಯದಲ್ಲಿ ನೀಲಿ ಸಮವಸ್ತ್ರದಲ್ಲಿರಲ್ಲ ಎಂದು ತಿದ್ದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ