ಕ್ವಾರ್ಟರ್‌ಫೈನಲ್‌ನಲ್ಲಿ ಒತ್ತಡ ನಮ್ಮ ಮೇಲಿಲ್ಲ, ಆಸೀಸ್ ಮೇಲಿದೆ: ಸರ್ಫರಾಜ್ ಅಹ್ಮದ್

ಮಂಗಳವಾರ, 17 ಮಾರ್ಚ್ 2015 (16:32 IST)
ಮುಂಬರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವಾದ ಆಸ್ಟ್ರೇಲಿಯಾ ಮೇಲೆ ತುಂಬಾ ಒತ್ತಡವಿದೆಯೇ ಹೊರತು ನಮ್ಮ ಮೇಲಿಲ್ಲ ಎಂದು ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮೆನ್ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.

27 ವರ್ಷ ವಯಸ್ಸಿನ ಸರ್ಫರಾಜ್, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ್ದರಿಂದ ಪಾಕ್ ತಂಡ ಜಯಗಳಿಸಿ  ಕ್ವಾರ್ಟರ್‌ಫೈನಲ್ ತಲುಪಲು ಕಾರಣವಾಗಿತ್ತು.

ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಎಂದೇ ಬಿಂಬಿತವಾಗಿರುವುದು ಹಾಗೂ ತವರಿನಲ್ಲಿ ಆಡುತ್ತಿರುವುದರಿಂದ ಆಸೀಸ್ ತಂಡದ ಮೇಲೆ ಭಾರಿ ಒತ್ತಡವಿದೆ ಎಂದಿದ್ದಾರೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸೀಸ್ ತಂಡವನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ ಎಂದರು.

ಆದರೆ,  ವೇಗದ ಬೌಲರ್ ಮೊಹಮ್ಮದ್ ಇರ್ಫಾನ್ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದಿರುವುದು ಕಳವಳಕ್ಕೆ ಕಾರಣವಾಗಿದೆ. ಆಸೀಸ್ ಬೌಲಿಂಗ್ ತುಂಬಾ ಬಲಿಷ್ಠವಾಗಿದ್ದರಿಂದ ಪಂದ್ಯ ಗೆಲ್ಲಲು ಹರಸಾಹಸ ಪಡಬೇಕಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ