ಕೊಹ್ಲಿ-ಶಾಸ್ತ್ರಿ ಮಾಡಿದ್ದ ಈ ರೂಲ್ಸ್ ಗಳನ್ನು ಮುರಿದ ರಾಹುಲ್ ದ್ರಾವಿಡ್
ಶುಕ್ರವಾರ, 13 ಮೇ 2022 (05:23 IST)
ಮುಂಬೈ: ಟೀಂ ಇಂಡಿಯಾದಲ್ಲಿ ಕೊಹ್ಲಿ-ರವಿಶಾಸ್ತ್ರಿ ಯುಗಾಂತ್ಯವಾದ ಬಳಿಕ ರಾಹುಲ್ ದ್ರಾವಿಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ದ್ರಾವಿಡ್ ಟೀಂ ಇಂಡಿಯಾಕ್ಕೆ ಬಂದ ಮೇಲೆ ತಂಡದ ಕೆಲವು ನಿಯಮಗಳು ಬದಲಾಗಿವೆ.
ಕೊಹ್ಲಿ-ಶಾಸ್ತ್ರಿ ಕಾಲದಲ್ಲಿ ಟೀಂ ಇಂಡಿಯಾಗೆ ಐಪಿಎಲ್ ಪ್ರದರ್ಶನದ ಆಧಾರದಲ್ಲಿ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈಗ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಐಪಿಎಲ್ ಒಂದೇ ಮಾನದಂಡವಾಗಬಾರದು. ದೇಶೀಯ ಕ್ರಿಕೆಟ್ ನಲ್ಲಿ ಪ್ರದರ್ಶನ ನೀಡಬೇಕು ಎಂಬ ಹೊಸ ನಿಯಮ ರೂಪಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಯಾವುದೇ ಆಟಗಾರರೂ ಅನ್ ಫಿಟ್ ಆಗಿ ತಂಡದಿಂದ ಹೊರಹೋದರೆ ಕಮ್ ಬ್ಯಾಕ್ ಮಾಡಲು ಫಿಟ್ನೆಸ್ ಸಾಬೀತುಪಡಿಸಲೇಬೇಕು ಎಂದು ಕಟ್ಟುನಿಟ್ಟು ಮಾಡಿದ್ದಾರಂತೆ. ಇದಲ್ಲದೆ, ಮೈದಾನ ಸಿಬ್ಬಂದಿಗೆ ನಗದು ಗಿಫ್ಟ್ ನೀಡುವುದು, ಪದಾರ್ಪಣೆ ಮಾಡುವ ಆಟಗಾರರಿಗೆ ಹಿರಿಯ ಆಟಗಾರರಿಂದ ಕ್ಯಾಪ್ ತೊಡಿಸುವುದು ಇತ್ಯಾದಿ ಹಳೆ ನಿಯಮಗಳನ್ನು ದ್ರಾವಿಡ್ ಮರಳಿ ತಂದಿದ್ದಾರೆ.