ಐಪಿಎಲ್ 2022: ಮುಂಬೈ ಇಂಡಿಯನ್ಸ್ ಗೆ ಸಿಎಸ್ ಕೆ ಸವಾಲು

ಗುರುವಾರ, 12 ಮೇ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ.

ಐಪಿಎಲ್ ನಲ್ಲಿ ಪ್ರಬಲ ತಂಡಗಳಾಗಿ ಮೆರೆಯುತ್ತಿದ್ದ ಎರಡೂ ಫ್ರಾಂಚೈಸಿಗಳು ಈ ಬಾರಿ ಮಂಕು ಕವಿದು ನಿಂತಿವೆ. ಸಿಎಸ್ ಕೆಗೆ ಮತ್ತೆ ಧೋನಿ ನಾಯಕರಾಗಿ ಕಮ್ ಬ್ಯಾಕ್ ಮಾಡಿದ ಮೇಲೆ ಕೊಂಚ ಚೇತರಿಕೆ ಕಂಡಿದೆ. ಕಳೆದ ಪಂದ್ಯದಲ್ಲಿ ಸಿಕ್ಕ ಭರ್ಜರಿ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಆದರೆ ಮುಂಬೈ ಕತೆ ಹೀಗಲ್ಲ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು ಅನುಭವಿಸಿರುವ ಮುಂಬೈಗೆ ಪ್ಲೇ ಆಫ್ ಅವಕಾಶ ಕಡಿಮೆ. ಹಾಗಿದ್ದರೂ ಟೂರ್ನಿಯಲ್ಲಿ ಇದುವರೆಗೆ ಸಿಕ್ಕ ಎರಡು ಗೆಲುವು ರೋಹಿತ್ ಪಡೆಯ ಭರವಸೆ ಚಿಗುರಿಸಿದೆ. ಮುಖ್ಯವಾಗಿ ಬ್ಯಾಟಿಂಗ್ ನಲ್ಲಿ ಸುಧಾರಿಸಿದರೆ ಮಾತ್ರ ಎದುರಾಳಿಗಳಿಗೆ ಸವಾಲೊಡ್ಡಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ