ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಯುಗ ಇಲ್ಲಿಗೇ ಮುಕ್ತಾಯ?

ಮಂಗಳವಾರ, 21 ನವೆಂಬರ್ 2023 (08:50 IST)
Photo Courtesy: Twitter
ಮುಂಬೈ: ಏಕದಿನ ವಿಶ್ವಕಪ್ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವಧಿಯೂ ಮುಕ್ತಾಯವಾಗುತ್ತಿದೆ. ಆದರೆ ಅವರು ಮುಂದೆ ಮುಂದುವರಿಯುವ ಸಾಧ‍್ಯತೆ ಕಡಿಮೆ ಎನ್ನಲಾಗುತ್ತಿದೆ.

ಒಂದು ವೇಳೆ ದ್ರಾವಿಡ್ ಬಯಸಿದರೆ ಪುನಃ ಅರ್ಜಿ ಹಾಕಿದರೆ ಬಿಸಿಸಿಐ ಅವರನ್ನೇ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಮುಂದುವರಿಸಲು ಆಸಕ್ತಿ ವಹಿಸಬಹುದು. ಆದರೆ ಅವರು ಪುನರಾಯ್ಕೆ ಬಯಸದೇ ಇದ್ದರೆ ದ್ರಾವಿಡ್ ಅವಧಿ ಇಲ್ಲಿಗೇ ಮುಕ್ತಾಯವಾಗಲಿದೆ. ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಹೊಸ ಕೋಚ್ ಆಗಮನವಾಗಬಹುದು.

ಟೀಂ ಇಂಡಿಯಾ ನಾಯಕನಾಗಿ, ಆಟಗಾರನಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ದ್ರಾವಿಡ್ ಬಳಿಕ ಕೋಚ್ ಆಗಿ ತಂಡಕ್ಕೆ ವಾಪಸ್ ಆಗಿದ್ದರು. ಆದರೆ ಇದೀಗ ಅವರು ಕೋಚ್ ಹುದ್ದೆಯಿಂದ ನಿರ್ಗಮಿಸಿದರೆ ಟೀಂ ಇಂಡಿಯಾ ಜೊತೆಗಿನ ಅವರ ನಂಟು ಇಲ್ಲಿಗೇ ಮುಕ್ತಾಯವಾಗಲಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ದ್ರಾವಿಡ್ ಯಗಾಂತ್ಯ ಎಂದೇ ಹೇಳಬಹುದು.

ಕೋಚ್ ಆಗಿ ಏಷ್ಯಾಕಪ್ ಗೆಲುವು, ವಿಶ್ವಕಪ್ ರನ್ನರ್ ಅಪ್ ಅವರ ಮುಖ್ಯ ಸಾಧನೆಗಳು. ಏಷ್ಯಾ ಕಪ್ ಗೆಲುವಿನ ಬಳಿಕ ಅಭಿಮಾನಿಗಳೂ ಅವರು ಕೋಚ್ ಆಗಿ ಮುಂದುವರಿಯಲಿ ಎಂಬ ಅಭಿಪ್ರಾಯ ಹೊಂದಿದ್ದಾರೆ. ತಂಡದ ಆಟಗಾರರಿಗೂ ದ್ರಾವಿಡ್ ಬಗ್ಗೆ ಗೌರವವಿದೆ. ಹೀಗಾಗಿ ಅವರು ಮುಂದುವರಿಯಲು ಬಿಸಿಸಿಐ ಮನವೊಲಿಸುತ್ತಾ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ