ವಿರಾಟ್ ಕೊಹ್ಲಿಗೆ ಇಂತಹದ್ದೊಂದು ಐಡಿಯಾ ಕೊಟ್ಟಿದ್ದೇ ರಾಹುಲ್ ದ್ರಾವಿಡ್ ಅಂತೆ!

ಬುಧವಾರ, 23 ಮೇ 2018 (09:06 IST)
ಮುಂಬೈ: ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೈರು ಹಾಜರಾಗಲು ಕಾರಣ ರಾಹುಲ್ ದ್ರಾವಿಡ್ ಅಂತೆ!

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡದೇ ಇಂಗ್ಲಿಷ್ ಕೌಂಟಿ ಕ್ರಿಕೆಟ್ ನಲ್ಲಿ ಆಡಲು ಕೊಹ್ಲಿ ನಿರ್ಧರಿಸಿದ್ದಾರೆ. ಈ ನಿರ್ಧಾರಕ್ಕೆ ರಾಹುಲ್ ದ್ರಾವಿಡ್ ಸಲಹೆಯೇ ಕಾರಣ ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.

‘ದ.ಆಫ್ರಿಕಾ ಪ್ರವಾಸ ಮಾಡಿದಾಗ ಟೀಂ ಇಂಡಿಯಾಗೆ ಸಾಕಷ್ಟು ತಯಾರಿ ನಡೆಸಲು ಅವಕಾಶ ಸಿಗಲಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಹೀಗಾಗಿ ನಾವು ಈ ಬಾರಿ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಜತೆಗೆ ಒಂದು ಚರ್ಚೆ ನಡೆಸಿದೆವು. ಈ ಸಂದರ್ಭದಲ್ಲಿ ರಾಹುಲ್ ಇಂತಹದ್ದೊಂದು ಐಡಿಯಾ ನೀಡಿದರು’ ಎಂದು ರಾಯ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ