ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ಇನ್ನು ರಾಹುಲ್ ದ್ರಾವಿಡ್ ಅವರೇ ಮೇಸ್ಟ್ರು!
ಶುಕ್ರವಾರ, 30 ಮಾರ್ಚ್ 2018 (09:09 IST)
ಮುಂಬೈ: ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಎಷ್ಟು ಶಿಸ್ತಾಗಿ ತಮ್ಮ ಹುಡುಗರಿಗೆ ಹೇಳಿಕೊಡುತ್ತಾರೆ ಎನ್ನುವುದನ್ನು ಈಗಾಗಲೇ ಎ ತಂಡದ ಕ್ರಿಕೆಟಿಗರು ಬಹಿರಂಗಪಡಿಸಿದ್ದಾರೆ. ಇನ್ನೀಗ ದ್ರಾವಿಡ್ ಟೀಂ ಇಂಡಿಯಾ ಕೆಲವು ಹಿರಿಯ ಆಟಗಾರರಿಗೂ ಮೇಸ್ಟ್ರು ಆಗಲಿದ್ದಾರೆ!
ಐಪಿಎಲ್ ಮುಗಿದ ಬಳಿಕ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಭಾರತ ತಂಡಕ್ಕೆ ಅಭ್ಯಾಸ ನೀಡಲು ಬಿಸಿಸಿಐ ಗಂಭೀರ ಹೆಜ್ಜೆಯಿಟ್ಟಿದೆ. ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳುವ ಮೊದಲು ದ್ರಾವಿಡ್ ನೇತೃತ್ವದ ಎ ತಂಡ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಹೀಗಾಗಿ ದ್ರಾವಿಡ್ ಜತೆಗೆ ಟೀಂ ಇಂಡಿಯಾ ಇಬ್ಬರು ಹಿರಿಯ ಟೆಸ್ಟ್ ಸ್ಪೆಷಲಿಸ್ಟ್ ಗಳನ್ನೂ ಬಿಸಿಸಿಐ ಕಳುಹಿಸಿ ಕೊಡಲಿದೆ.
ಮುರಳಿ ವಿಜಯ್ ಮತ್ತು ಅಜಿಂಕ್ಯಾ ರೆಹಾನೆಗೆ ದ್ರಾವಿಡ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ನಲ್ಲಿ ಅಭ್ಯಾಸ ನಡೆಸುವ ಅದೃಷ್ಟ ಒದಗಿಬರಲಿದೆ. ಈ ಇಬ್ಬರು ಆಟಗಾರರು ಎ ತಂಡದ ಇತರ ಆಟಗಾರರೊಂದಿಗೆ ದ್ರಾವಿಡ್ ಗರಡಿಯಲ್ಲಿ ಪಳಗಲಿದ್ದಾರೆ. ದ್ರಾವಿಡ್ ಗೆ ಸಹಾಯಕರಾಗಿ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಭರತ್ ಅರುಣ್ ಇರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ