ವಿರಾಟ್ ಕೊಹ್ಲಿ ಗಾಯದ ಬಗ್ಗೆ ಮಾಹಿತಿ ಕೊಟ್ಟ ರಾಹುಲ್ ದ್ರಾವಿಡ್
ಈಗ 1-1 ರಲ್ಲಿ ಸರಣಿ ಸಮಬಲವಾಗಿದ್ದು, ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಈ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡುವುದು ಮುಖ್ಯವಾಗಿದೆ.
ಎರಡನೇ ಪಂದ್ಯದ ಬಳಿಕ ಕೋಚ್ ರಾಹುಲ್ ದ್ರಾವಿಡ್ ನಾಯಕ ವಿರಾಟ್ ಗಾಯದ ಕುರಿತು ಅಪ್ ಡೇಟ್ ಕೊಟ್ಟಿದ್ದಾರೆ. ವಿರಾಟ್ ಮುಂದಿನ ಪಂದ್ಯಕ್ಕೆ ಚೇತರಿಸಿಕೊಳ್ಳಬೇಕು. ಈಗಿನ ಪರಿಸ್ಥಿತಿ ಗಮನಿಸಿದರೆ ನಾಲ್ಕು ದಿನಗಳಲ್ಲಿ ಕೆಲವು ನೆಟ್ಸ್ ಸೆಷನ್ ಆಗುವಷ್ಟರಲ್ಲಿ ಅವರು ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವಿದೆ ಎಂದು ದ್ರಾವಿಡ್ ಹೇಳಿದ್ದಾರೆ.