ಅದೃಷ್ಟದ ತಾಣವೇ ಟೀಂ ಇಂಡಿಯಾಗೆ ಕೈ ಕೊಟ್ಟಿತು
240 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಆಫ್ರಿಕಾ ನಿನ್ನೆ ಮಳೆಯ ಕಾಟದ ನಡುವೆಯೂ ಅದ್ಭುತ ಬ್ಯಾಟಿಂಗ್ ನಡೆಸಿ 3 ವಿಕೆಟ್ ನಷ್ಟಕ್ಕೆ 243 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಡೀನ್ ಎಲ್ಗರ್ 96 ರನ್ ಗಳಿಸಿ ಕೊನೆಯವರೆಗೂ ಔಟಾಗದೇ ಉಳಿದು ತಂಡಕ್ಕೆ ಗೆಲುವು ಕೊಡಿಸಿದರು.
ಇದರೊಂದಿಗೆ ಮುಂದಿನ ಪಂದ್ಯಕ್ಕೆ ಫೈನಲ್ ಕಳೆ ಬಂದಿದ್ದು, ಭಾರತ ಈ ಪಂದ್ಯವನ್ನು ಗೆದ್ದರೆ ದ.ಆಫ್ರಿಕಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಇತಿಹಾಸ ನಿರ್ಮಿಸಲಿದೆ.