ಇವತ್ತಿನ ಪಂದ್ಯ ಮಳೆಯಿಂದ ರದ್ದಾದರೆ ಭಾರತಕ್ಕೆ ಅನುಕೂಲವೋ..? ಅನಾನುಕೂಲವೋ..? ಇಲ್ಲಿದೆ ಲೆಕ್ಕಾಚಾರ

ಭಾನುವಾರ, 11 ಜೂನ್ 2017 (09:27 IST)
ಇಂಗ್ಲೆಂಡ್`ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಮಹತ್ವದ ಘಟ್ಟ ತಲುಪಿದೆ. ಎ ಗ್ರೂಪ್`ನ 2 ತಂಡಗಳು ಸೆಮಿಫೈನಲ್`ಗೆ ಎಂಟ್ರಿ ಕೊಟ್ಟಿದ್ದು,  ಬಿ ಗ್ರೂಪ್`ನಲ್ಲಿ 2 ಪಂದ್ಯ ಬಾಕಿ ಉಳಿದಿದ್ದು, ಗೆದ್ದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಗ್ರೂಪ್ ಎ ನಲ್ಲಿ ಮೂರೂ ಪಂದ್ಯ ಗೆದ್ದಿರುವ ಇಂಗ್ಲೆಂಡ್ 6 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದ್ದರೆ, ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಪ್ರಬಲ ತಂಡಗಳಿಗೆ ಸೆಡ್ಡು ಹೊಡೆದು ಸೆಮಿಫೈನಲ್ ಪ್ರವೇಶಿಸಿದೆ.

ಬಾಂಗ್ಲಾಗೆ ವರವಾಗಿ ಆಸೀಸ್ ಶಾಪವಾದ ಮಳೆ: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಳೆ ಆಟವೇ ಜೋರಾಗಿದೆ. 5-6 ಪಂದ್ಯಗಳಲ್ಲಿ ಮಳೆ ಅಡ್ಡಿ ಮಾಡಿದೆ. ಆಸ್ಟ್ರೇಲಿಯಾ ಆಡಿದ ಮೂರೂ ಪಂದ್ಯಗಳಿಗೆ ಮಳೆ ಅಡ್ಡಿಯಾಯಿತು. 3ನೇ ಪಂದ್ಯದಲ್ಲಿ ಇಂಗ್ಲೆಂಡ್ ಡಕ್ವರ್ತ್ ಲೆವಿಸ್ ನಿಯಮದ ಪ್ರಕಾರ ಗೆಲುವು ಸಾಧಿಸಿದೆ. ಇನ್ನುಳಿದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳು ಮಳೆಯಿಂದ ರದ್ದಾಗಿದ್ದು, ಎರಡೂ ತಂಡಗಳು ತಲಾ ಒಂಒಂದೊಂದು ಅಂಕ ಗಳಿಸಿವೆ. ಹೀಗಾಗಿ, ಆಸೀಸ್ ನಿಜವಾದ ಹೋರಾಟ ನಡೆಸಲು ಸಾಧ್ಯವೇ ಆಗಿಲ್ಲ. ಮಳೆಯಿಂದ ರದ್ದಾದ ಎರಡು ಪಂದ್ಯಗಳಿಂದ ಸಿಕ್ಕ ಎರಡು ಅಂಕಗಳೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.

ಮಳೆ ಬಂದರೆ ಭಾರತಕ್ಕೆ ಅನುಕೂಲ: ಇತ್ತ, ಗ್ರೂಪ್ ಬಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ನಾಲ್ಕೂ ತಂಡಗಳಿಗೂ ಸೆಮಿಫೈನಲ್ಗೇರುವ ಅವಕಾಶವಿದೆ. ತಲಾ ಒಂದೊಂದು ಪಂದ್ಯ ಗೆದ್ದು ಒಂದೊಂದು ಪಂದ್ಯ ಸೋತಿರುವ ನಾಲ್ಕೂ ತಂಡಗಳೂ ಉಳಿದಿರುವ ಒಂದು ಪಂದ್ಯ ಗೆದ್ದರೆ ಸೆಮಿಫೈನಲ್`ಗೆ ಎಂಟ್ರಿಕೊಡಲಿವೆ.  

ಆದರೆ, ಸರಣಿಯಲ್ಲಿ ಅತಿ ಹೆಚ್ಚು ಆಟವಾಡಿರುವುದು ಮಳೆ. ಮಳೆ ಬಂದು ಯಾವುದಾದರೂ ಪಂದ್ಯ ರದ್ದಾದರೆ ಸೆಮಿಫೈನಲ್ ಲೆಕ್ಕಾಚಾರ ಉಲ್ಟಾ ಆಗಲಿದೆ.

ಹೌದು, ಭಾರತ-ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದ ರದ್ದಾದ್ದರೆ ಎರಡೂ ತಂಡಗಳು ಒಂದೊಂದು ಅಂಕ ಹಂಚಿಕೊಳ್ಳಲಿದ್ದು, ಎರಡೂ ತಂಡ ಮೂರು ಅಂಕ ಗಳಿಸಿದಂತಾಗುತ್ತೆ. ಆದರೆ, ರನ್ ರೇಟ್ ಎಲ್ಲರಿಗಿಂತಲೂ ಹೆಚ್ಚಿರುವ ಭಾರತ ತಂಡ ಸೆಮಿಫೈನಲ್`ಗೆ ಎಂಟ್ರಿಕೊಡಲಿದೆ.

ಇವತ್ತಿನ ಪಂದ್ಯವೂ ರದ್ದಾಗಿ ನಾಳೆ ನಡೆಯಲಿರುವ ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯವೂ ಮಳೆಯಿಂದ ರದ್ದಾದರೆ. ರನ್ ರೇಟ್`ನಲ್ಲಿ 2ನೇ ಸ್ಥಾನದಲ್ಲಿರುವ ಆಫ್ರಿಕಾ ಸೆಮಿಗೆ ಎಂಟ್ರಿ ಕೊಡಲಿದೆ.

ಮಳೆಯ ಲೆಕ್ಕಾಚಾರ ಬಿಟ್ಟು ನೋಡಿದರೆ ಎರಡೂ ಪಂದ್ಯಗಳೂ ನಿರಾತಂಕವಾಗಿ ನಡೆದರೆ ಗೆದ್ದ ತಂಡಗಳು ಸೆಮಿಫೈನಲ್`ಗೆ ಎಂಟ್ರಿಕೊಡಲಿವೆ.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ