ಅಂಡರ್ 19 ವಿಶ್ವಕಪ್: ದ್ರಾವಿಡ್ ಹುಡುಗರಿಗೆ ಆತಂಕ ತಂದಿತ್ತ ಮಳೆ! ಕನಸಿಗೆ ತಣ್ಣೀರು ಬೀಳುತ್ತಾ?!

ಶನಿವಾರ, 3 ಫೆಬ್ರವರಿ 2018 (10:57 IST)
ಬೇ ಓವಲ್: ಅಂಡರ್ 19 ವಿಶ್ವಕಪ್ ಗೆದ್ದು ದಾಖಲೆ ಮಾಡಲು ಹೊರಟಿದ್ದ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಭಾರತೀಯ ಕ್ರಿಕೆಟಿಗರಿಗೆ ಮಳೆ ಅಡ್ಡಗಾಲು ಹಾಕಿದೆ.
 

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾವನ್ನು ಸಂಘಟಿತ ದಾಳಿ ಸಂಘಟಿಸಿ ಕೇವಲ 216 ರನ್ ಗೆ ಆಲೌಟ್ ಮಾಡಿದ್ದ ಭಾರತೀಯರು, ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆರಂಭಿಸಿದ್ದರು. ಗುರಿ ಬೆನ್ನತ್ತುತ್ತಿದ್ದ ಭಾರತೀಯರು 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಸಿದ್ದರು. ಆದರೆ ಅಷ್ಟರಲ್ಲಿ ಮಳೆ ಸುರಿಯಲಾರಂಭಿಸಿದೆ.

ಹೀಗಾಗಿ ಪಂದ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಮಳೆ ಬೇಗನೇ ನಿಲ್ಲದಿದ್ದರೆ ಡಕ್ ವರ್ತ್ ಲೂಯಿಸ್ ನಿಯಮದ ಅನುಸಾರ ಗೆಲುವಿಗೆ ಹೊಸ ಗುರಿ ನಿಗದಿಯಾಗಬಹುದು. ಅಥವಾ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಸಮಾನ ಗೌರವ ಸಿಗಲಿದೆ. ಇದರಿಂದ ನಾಲ್ಕನೇ ಬಾರಿ ವಿಶ್ವಕಪ್ ಗೆದ್ದು ವಿಶ್ವದಾಖಲೆ ಮಾಡುವ ದ್ರಾವಿಡ್ ಹುಡುಗರ ಕನಸು ಭಗ್ನಗೊಳ್ಳಲಿದೆ. ಅಂತೂ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಕ್ಕೆ ಮಳೆ ಅಡ್ಡಿ ತಂದು ಭಾರತೀಯರಿಗೆ ನಿರಾಶೆ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ