ಐಪಿಎಲ್ ನಲ್ಲಿ ಇಂದು ರಾಜಸ್ಥಾನ್-ಪಂಜಾಬ್ ಕಾಳಗ
ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡ ಮೊದಲ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಸಾಧಿಸಿತ್ತು. ಬ್ಯಾಟಿಂಗ್ ಜೊತೆ ಬೌಲಿಂಗ್ ನಲ್ಲೂ ಪಂಜಾಬ್ ಗಮನಾರ್ಹ ಪ್ರದರ್ಶನ ನೀಡಿತ್ತು. ಸ್ವತಃ ಧವನ್ ಆಡಿದ್ದು ವಿಶೇಷ.
ಇತ್ತ ರಾಜಸ್ಥಾನ್ ರಾಯಲ್ಸ್ ಕೂಡಾ ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಅತ್ಯುತ್ತಮ ಸರಾಸರಿಯೊಂದಿಗೆ ಅಂಕಪಟ್ಟಿಯಲ್ಲಿ ಮೇಲ್ಮಟ್ಟದಲ್ಲಿದೆ. ರಾಜಸ್ಥಾನ್ ಗೆ ಬ್ಯಾಟಿಂಗ್ ಜೊತೆಗೆ ಸ್ಪಿನ್ನರ್ ಗಳೂ ಶಕ್ತಿಯಾಗಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ಯಾರು ಕೂಟದ ಎರಡನೇ ಗೆಲುವಿನ ಸರದಾರರಾಗುತ್ತಾರೆ ನೋಡಬೇಕು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.