ಭಾರತದ ಕೋಚ್ ಹುದ್ದೆ ದಕ್ಕದ ನಿರಾಶೆಯನ್ನು ನೀಗಿಕೊಳ್ಳಲು ಲಾಲ್‌ಚಂದ್ ರಜಪೂತ್ ಜೀವನದಲ್ಲಿ ಹೊಸ ಧ್ಯೇಯೋದ್ದೇಶ ಹೊಂದಿದ್ದಾರೆ. ಅದು ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಆಡಬೇಕೆಂಬುದು. ಮಾಜಿ ಭಾರತ ಮತ್ತು ಮುಂಬೈ ಓಪನರ್ ಇತ್ತೀಚೆಗೆ ಕ್ರಿಕೆಟ್ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರದಲ್ಲಿ ಕೋಚ್ ಉಸ್ತುವಾರಿ ವಹಿಸಿಕೊಂಡು ತಮ್ಮ ಹೊಸ ಬಳಗದೊಂದಿಗೆ ಫಲಪ್ರದ ತಿಂಗಳ ಕಾಲ ಐರೋಪ್ಯ ಪ್ರವಾಸ ಮಾಡಿ ಹಿಂತಿರುಗಿದ್ದಾರೆ.
ಅವರು ಟಾಪ್ ತಂಡಗಳ ಜತೆ ಆಡಲು ಬಯಸುವುದಾಗಿ ತಿಳಿಸಿದರೆಂದು ರಜಪೂತ್ ಹೇಳಿದರು. ಆದರೆ ಯಾವುದೂ ಸುಲಭವಾಗಿ ಸಿಗುವುದಿಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಿರಬೇಕು. ವಿಶೇಷವಾಗಿ ಫಿಟ್ನೆಸ್ ಮತ್ತು ಫೀಲ್ಡಿಂಗ್ ಕುರಿತು ಕಷ್ಟಪಡಬೇಕು ಎಂದು ರಜಪೂತ್ ಹೇಳಿದ್ದರು. ಪ್ರತಿಯೊಬ್ಬ ಆಟಗಾರ ನೆಟ್‌ನಲ್ಲಿ ಕನಿಷ್ಟ 50 ಕ್ಯಾಚ್‌ಗಳನ್ನು ಹಿಡಿಯುವುದನ್ನು ಕಡ್ಡಾಯ ಮಾಡಿದ್ದೆ ಎಂದು ರಜಪೂತ್ ಹೇಳಿದರು.