ಭಾರತ ತಂಡ ಸೋತಿದ್ದರಿಂದ ರಾಮ್ ಗೋಪಾಲ್ ವರ್ಮಾಗೆ ಫುಲ್ ಖುಷ್

ಗುರುವಾರ, 26 ಮಾರ್ಚ್ 2015 (19:36 IST)
ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋಲಪ್ಪಿದ್ದರಿಂದ ಅನೇಕ ಜನ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಆದರೆ ಚಿತ್ರನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ವಿವಾದಾತ್ಮಕ ಟ್ವೀಟ್‌ಗಳಿಗಾಗಿ ಕೆಲವು ಬಾರಿ ತೊಂದರೆಗೆ ಸಿಗುತ್ತಿದ್ದು,  ಕ್ರಿಕೆಟ್ ಬಗ್ಗೆ ತಮಗಿರುವ ದ್ವೇಷವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. 
ಅವರ ಟ್ವೀಟ್‌ಗಳಲ್ಲಿ ಕೆಲವನ್ನು ಕೆಳಗೆ ನೀಡಲಾಗಿದೆ.
 
''ಭಾರತ ಸೋತಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಏಕೆಂದರೆ ನಾನು ಕ್ರಿಕೆಟ್ ದ್ವೇಷಿಸುತ್ತೇನೆ. ಕ್ರಿಕೆಟ್‌ಗಿಂತ ಹೆಚ್ಚಾಗಿ ನಾನು ದ್ವೇಷಿಸುವುದು ಕ್ರಿಕೆಟ್ ಅಭಿಮಾನಿಗಳನ್ನು''. 
''ನಾನು ಕ್ರಿಕೆಟ್ ದ್ವೇಷಿಸುತ್ತೇನೆ. ಏಕೆಂದರೆ ನಾನು ರಾಷ್ಟ್ರಪ್ರೇಮಿಯಾಗಿದ್ದು ಕ್ರಿಕೆಟ್ ನಮ್ಮ ದೇಶದ ಜನರನ್ನು ಅನುತ್ಪಾದಕವಾಗಿ ಮಾಡುತ್ತದೆ. ಏಕೆಂದರೆ ಅವರು ಕೆಲಸ ನಿಲ್ಲಿಸಿ ಕ್ರಿಕೆಟ್ ವೀಕ್ಷಿಸುತ್ತಾರೆ.'' 
 
 ''ದೇಶದ ಎಲ್ಲಾ ದೇವರುಗಳಿಗೆ ನಾನು ಪ್ರಾರ್ಥಿಸುವುದೇನೆಂದರೆ ನಮ್ಮ ದೇಶದ ಜನರನ್ನು ಅಪಾಯಕಾರಿ ಕಾಯಿಲೆಯಾದ ಕ್ರಿಕೆಟೈಟೀಸ್‌ನಿಂದ ಗುಣಪಡಿಸಲಿ''
'' ಭಾರತ ಕ್ರಿಕೆಟ್ ಆಡುವುದನ್ನು ನಿಲ್ಲಿಸುವವರೆಗೆ , ಭಾರತೀಯರು ಕ್ರಿಕೆಟ್ ಆಟ ವೀಕ್ಷಿಸುವುದನ್ನು ನಿಲ್ಲಿಸಿ ಕೆಲಸ ಆರಂಭಿಸುವ ತನಕ ಉಳಿದ ರಾಷ್ಟ್ರದ ತಂಡಗಳು ಭಾರತ ತಂಡವನ್ನು ಮತ್ತೆ ಮತ್ತೆ ಸೋಲಿಸಿ ಎಂದು ಮನವಿ ಮಾಡುತ್ತೇನೆ.''
 
''ಆಲ್ಕೋಹಾಲ್ ಮತ್ತು ಸಿಗರೇಟುಗಳ ಚಟವು ಕೇವಲ ಸೀಮಿತವಾಗಿರುತ್ತದೆ ಮತ್ತು ವೈಯಕ್ತಿಕ ಹಾನಿ ಮಾತ್ರ ಮಾಡುತ್ತದೆ. ಆದರೆ ಕ್ರಿಕೆಟ್‌ ಬಗ್ಗೆ ಅಂಟಿರುವ ಚಟವು ರಾಷ್ಟ್ರೀಯ ಕಾಯಿಲೆಯಾಗಿದೆ.'' 

ವೆಬ್ದುನಿಯಾವನ್ನು ಓದಿ