ರಣಜಿ ಟ್ರೋಫಿ ಕ್ರಿಕೆಟ್: ಮಯಾಂಕ್ ಅಗರ್ವಾಲ್ ಗೆ ದ್ವಿಶತಕ ಜಸ್ಟ್ ಮಿಸ್

ಶುಕ್ರವಾರ, 10 ನವೆಂಬರ್ 2017 (16:51 IST)
ಬೆಂಗಳೂರು: ದೆಹಲಿ ವಿರುದ್ಧದ  ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 649 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದು, ಮಯಾಂಕ್ ಅಗರ್ವಾಲ್ ಸ್ವಲ್ಪದರಲ್ಲೇ ದ್ವಿಶತಕ ವಂಚಿತರಾದರು.

 
ನಿನ್ನೆ 348 ಕ್ಕೆ 4 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಕರ್ನಾಟಕ ಇಂದು ಪ್ರಥಮ ಇನಿಂಗ್ಸ್ ನಲ್ಲಿ 649 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಿನ್ನೆ ಅಜೇಯರಾಗುಳಿದಿದ್ದ ಮಯಾಂಕ್ ಅಗರ್ವಾಲ್ 176 ರನ್ ಗಳಿಸಿ ರನೌಟ್ ಆದರೆ, ಸ್ಟುವರ್ಟ್ ಬಿನ್ನಿ ಶತಕ (118) ಗಳಿಸಿದರು.

ಇಂದು ಕರ್ನಾಟಕಕ್ಕೆ ಆಸರೆಯಾಗಿದ್ದ ಬಿನ್ನಿಗೆ ಆಸರೆ ನೀಡಿದ ಶ್ರೇಯಸ್ ಗೋಪಾಲ್ 92 ರನ್ ಗಳಿಸಿ ಔಟಾದರು. ಅಭಿಮನ್ಯು ಮಿಥುನ್ 35 ರನ್ ಗಳಿಸಿ ಅಜೇಯರಾಗುಳಿದರು. ದಿನದಂತ್ಯಕ್ಕೆ ದೆಹಲಿ ಬ್ಯಾಟಿಂಗ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೇ 20 ರನ್ ಗಳಿಸಿದೆ. ಆರಂಭಿಕರಾದ ಗೌತಮ್ ಗಂಭೀರ್ 12 ಮತ್ತು ಉನ್ಮುಕ್ತ್ ಚಾಂದ್ 8 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ