ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಇನಿಂಗ್ಸ್ ಗೆಲುವು
ಕರ್ನಾಟಕ ಪರ ನಾಯಕ ವಿನಯ್ ಕುಮಾರ್ ಮಾರಕ ದಾಳಿ ಸಂಘಟಿಸಿ 6 ವಿಕೆಟ್ ಕಬಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪವನ್ ದೇಶಪಾಂಡೆ 2 ವಿಕೆಟ್ ಹಾಗೂ ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ತಲಾ 1 ವಿಕೆಟ್ ಕಿತ್ತು ಹ್ಯಾಟ್ರಿಕ್ ಗೆಲುವಿಗೆ ಮುನ್ನುಡಿ ಬರೆದರು. ತ್ರಿಶಕ ಗಳಿಸಿದ್ದ ಮಯಾಂಕ್ ಅಗರ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಗೆಲುವಿನೊಂದಿಗೆ ಕರ್ನಾಟಕ 20 ಅಂಕ ಗಳಿಸಿತು.