ದೆಹಲಿ: ಒಡಿಶಾ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದ್ದ ಕರ್ನಾಟಕ ತಂಡ ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳ ನೆರವಿನಿಂದ ಚೇತರಿಸಿಕೊಂಡಿದೆ. ಅಂತಿಮ ದಿನ ಊಟದ ವಿರಾಮಕ್ಕೆ 7 ವಿಕೆಟ್ ಕಳೆದುಕೊಂಡು 371 ರನ್ ಗಳಿಸಿದ್ದು, ಒಟ್ಟಾರೆ 208 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ಕರ್ನಾಟಕಕ್ಕೆ ಆಸರೆಯಾದ ವಿಕೆಟ್ ಕೀಪರ್ ಸಿ. ಗೌತಮ್ 95 ರನ್ ಗಳಿಸಿ ಔಟಾದರು. ಈ ಮೂಲಕ ಐದೇ ರನ್ ಗಳಿಂದ ಶತಕ ವಂಚಿತರಾದರು. ಆದರೆ ಬೌಲಿಂಗ್ ನಲ್ಲಿ ಐದು ವಿಕೆಟ್ ಗಳಿಸಿ ಮಿಂಚಿದ್ದ ಶ್ರೇಯಾಸ್ ಗೋಪಾಲ್ ಬ್ಯಾಟಿಂಗ್ ನಲ್ಲೂ ಮಿಂಚಿ ಅಜೇಯವಾಗಿ 70 ರನ್ ಗಳಿಸಿದ್ದಾರೆ. ಅವರಿಗೆ ಕೆ. ಗೌತಮ್ 34 ರನ್ ಗಳಿಸಿ ಸಾಥ್ ನೀಡಿದ್ದಾರೆ.
ಸತತ ನಾಲ್ಕು ಪಂದ್ಯ ಗೆದ್ದು ಬೀಗಿದ ಕರ್ನಾಟಕ ಈ ಪಂದ್ಯದ ಆರಂಭದ ಎರಡೂ ದಿನ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎಡವಿ ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಗೌತಮ್ ಧ್ವಯರು ಹಾಗೂ ನಾಯಕ ವಿನಯ್ ಕುಮಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ