ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಆಘಾತ ನೀಡಿದ ಒಡಿಶಾ

ಬುಧವಾರ, 23 ನವೆಂಬರ್ 2016 (12:30 IST)
ದೆಹಲಿ: ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಇದುವರೆಗೆ ನಾಲ್ಕು ಪಂದ್ಯ ಗೆದ್ದು ಬೀಗುತ್ತಿದ್ದ ಕರ್ನಾಟಕ್ಕೆ ದುರ್ಬಲ ಎದುರಾಳಿ ಎನಿಸಿಕೊಂಡಿದ್ದ ಒಡಿಶಾ ಆಘಾತ ನೀಡಿದೆ. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಸರದಿ ಆರಂಭಿಸಿರುವ ಕರ್ನಾಟಕ ಊಟದ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿದೆ.

ಇದರೊಂದಿಗೆ ಕರ್ನಾಟಕ ಇನ್ನೂ61  ರನ್ ಹಿನ್ನಡೆಯಲ್ಲಿದೆ. ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ  179 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಒಡಿಶಾ ಆರಂಭಿಕರು ಉತ್ತಮವಾಗಿ ಆಡದಿದ್ದರೂ ಕೆಳ ಕ್ರಮಾಂಕದಲ್ಲಿ ಸೌರಭ್ ತಿವಾರಿ ಹೊಡೆದ 85 ರನ್ ಮತ್ತು ಬಿಪ್ಲಾಬ್ ಹೊಡೆದ 58 ರನ್ ಗಳ ನೆರವಿನಿಂದ 342 ಕ್ಕೆ ಆಲೌಟ್ ಆಯಿತು.

ಅದರೊಂದಿಗೆ ಕರ್ನಾಟಕ 163 ರನ್ ಗಳ ಹಿನ್ನಡೆ ಅನುಭವಿಸಿತು. ಕರ್ನಾಟಕ ಪರ ಶ್ರೇಯಾಸ್ ಗೋಪಾಲ್ ಐದು ವಿಕೆಟ್ ಗಳಿಸಿದ್ದು ಬಿಟ್ಟರೆ, ಬೇರೆ ಯಾರೂ ಪರಿಣಾಮ ಬೀರಲಿಲ್ಲ. ದ್ವಿತೀಯ ಸರದಿ ಆರಂಭಿಸಿದ ಕರ್ನಾಟಕ 16 ರನ್ ಗಳಿಸುವಷ್ಟರಲ್ಲಿ ಮಯಾಂಕ್ ಅಗರ್ ವಾಲ್ ವಿಕೆಟ್ ಕಳೆದುಕೊಂಡಿದೆ. ನಂತರ ರಾಬಿನ್ ಉತ್ತಪ್ಪ ಮತ್ತು ಎಂ.ಕೆ. ಅಬ್ಬಾಸ್ ಕೂಡಾ ವಿಕೆಟ್ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ