ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬೌಲರ್ ಗಳ ಉತ್ತಮ ಪ್ರದರ್ಶನದಿಂದಾಗಿ ಪಂದ್ಯ ಸಮಸ್ಥಿತಿಯಲ್ಲಿದೆ.
ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟ್ ಆಗಿತ್ತು. ಶ್ರೀನಿವಾಸ್ ಶರತ್ 83 ರನ್ ಗಳಿಸಿ ಕೊನೆಯವರೆಗೂ ನಾಟೌಟ್ ಆಗಿ ಉಳಿದರು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ್ದ ಸೌರಾಷ್ಟ್ರ ಎರಡನೇ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ. ಇನ್ನೂ 48 ರನ್ ಗಳ ಹಿನ್ನಡೆಯಲ್ಲಿರುವ ಸೌರಾಷ್ಟ್ರಕ್ಕೆ ಅಂತಿಮ ಮೂರು ವಿಕೆಟ್ ಮಾತ್ರ ಬಾಕಿಯಿದೆ.
ಕರ್ನಾಟಕ ಪರ ರೋಹಿತ್ ಮೋರೆ ಅತ್ಯುತ್ತಮ ದಾಳಿ ಸಂಘಟಿಸಿ 5 ವಿಕೆಟ್ ಗಳ ಗೊಂಚಲು ಪಡೆದರು. ಅಪಾಯಕಾರಿ ಚೇತೇಶ್ವರ ಪೂಜಾರ ಅಭಿಮನ್ಯು ಮಿಥುನ್ ಬೌಲಿಂಗ್ ನಲ್ಲಿ 45 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಉಳಿದೊಂದು ವಿಕೆಟ್ ಶ್ರೇಯಸ್ ಗೋಪಾಲ್ ಪಾಲಾಯಿತು. ನಾಳೆ ಬೇಗನೇ ಸೌರಾಷ್ಟ್ರ ಇನಿಂಗ್ಸ್ ಕೊನೆಗಾಣಿಸಿದರೆ ಕರ್ನಾಟಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ