ಹಾರ್ದಿಕ್-ಕೆಎಲ್ ರಾಹುಲ್ ಮೇಲಿನ ನಿಷೇಧ ತೆರವು

ಶುಕ್ರವಾರ, 25 ಜನವರಿ 2019 (09:15 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಮೇಲೆ ಹೇರಲಾಗಿದ್ದ ನಿಷೇಧ ಶಿಕ್ಷೆಯನ್ನು ಬಿಸಿಸಿಐ ತೆರವುಗೊಳಿಸಿದೆ.


ಇಬ್ಬರೂ ಕ್ರಿಕೆಟಿಗರ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರವರಿ 5 ರಂದು ನಡೆಸಲು ತೀರ್ಮಾನಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ಆಡಳಿತಾಧಿಕಾರಿಗಳು ಕ್ರಿಕೆಟಿಗರು ಯಾವುದೇ ಕ್ರಿಕೆಟ್ ಪಂದ್ಯವಾಡದಂತೆ ಹೇರಿದ್ದ ನಿಷೇಧ ತೆರವುಗೊಳಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ವಿಚಾರಣೆ ಮುಗಿಯುವವರೆಗೆ ನಿಷೇಧ ತೆರವುಗೊಳಿಸಲಾಗಿದೆ. ಅದಾದ ಬಳಿಕ ಕೋರ್ಟ್ ತೀರ್ಪಿನಂತೆ ಇವರಿಗೆ ಶಿಕ್ಷೆ ಸಿಗಲಿದೆ.

ನಿಷೇಧ ತೆರವುಗೊಂಡಿರುವುದರಿಂದ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ಸರಣಿಗೆ ಮತ್ತು ಕೆಎಲ್ ರಾಹುಲ್ ಭಾರತ ಎ ಪರ ಆಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅದೇನೇ ಇದ್ದರೂ ಸದ್ಯಕ್ಕೆ ಇಬ್ಬರೂ ಕ್ರಿಕೆಟಿಗರು ನಿರಾಳವಾಗಿದ್ದು, ಐಪಿಎಲ್, ವಿಶ್ವಕಪ್ ಭವಿಷ್ಯಕ್ಕೆ ಕಂಟಕವಾಗಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ