ರಣಜಿ ಟ್ರೋಫಿ: ಕರ್ನಾಟಕಕ್ಕೆ ಇಂದು ಸೆಮಿಫೈನಲ್ ಕನಸು

ಸೋಮವಾರ, 24 ಫೆಬ್ರವರಿ 2020 (09:16 IST)
ಜಮ್ಮು ಕಾಶ್ಮೀರ: ರಣಜಿ ಟ್ರೋಫಿ ಕ್ರಿಕೆಟ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ಜಮ್ಮು ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿರುವ ಕರ್ನಾಟಕ ಸೆಮಿಫೈನಲ್ ಕನಸಿನಲ್ಲಿದೆ.


ಮೊದಲ ಇನಿಂಗ್ಸ್ ನಲ್ಲಿ ನಿರ್ಣಾಯಕ ಮುನ್ನಡೆ ಪಡೆದಿದ್ದ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ ನಿನ್ನೆಯ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿದ್ದು 259 ರನ್ ಗಳ ಮುನ್ನಡೆ ಸಾಧಿಸಿದೆ. ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 206 ಮಾಡಿದ್ದರೆ ಜಮ್ಮು 192 ರನ್ ಗಳಿಗೆ ಆಲೌಟ್ ಆಗಿತ್ತು.

ಇಂದು ಕೊನೆಯ ದಿನವಾಗಿದ್ದು, ಒಂದು ವೇಳೆ ಕರ್ನಾಟಕ ಡ್ರಾ ಸಾಧಿಸಿದರೂ ಸೆಮಿಫೈನಲ್ ಗೇರುವುದು ಖಚಿತವಾಗಲಿದೆ. ನಿನ್ನೆಯ ದಿನದಂತ್ಯಕ್ಕೆ ಕೆ ಸಿದ್ಧಾರ್ಥ್ 75 ರನ್ ಮತ್ತು ಶ್ರೀನಿವಾಸ್ ಶರತ್ 9 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ