ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸೋತ ಟೀಂ ಇಂಡಿಯಾ

ಸೋಮವಾರ, 24 ಫೆಬ್ರವರಿ 2020 (08:55 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಅತಿಥೇಯ ನ್ಯೂಜಿಲೆಂಡ್ 10 ವಿಕೆಟ್ ಗಳಿಂದ ಗೆದ್ದುಕೊಂಡಿದೆ.


ನಾಲ್ಕನೇ ದಿನವೇ ಟೀಂ ಇಂಡಿಯಾಗೆ ಸೋಲಿನ ಅವಮಾನ ಎದುರಾಗಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ನಿನ್ನೆಯ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದ್ದ ಟೀಂ ಇಂಡಿಯಾ ಇಂದು 191 ರನ್ ಗಳಿಸಿ ಆಲೌಟ್ ಆಗಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಭಾರತದ ಪರ ಮಯಾಂಕ್ ಅಗರ್ವಾಲ್ 58 ಮತ್ತು ರಿಷಬ್ ಪಂತ್ 25 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳೂ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ.

ಮೊದಲ ಇನಿಂಗ್ಸ್ ಮುನ್ನಡೆ ಹೊಂದಿದ್ದ ನ್ಯೂಜಿಲೆಂಡ್ ಗೆ ದ್ವಿತೀಯ ಇನಿಂಗ್ಸ್ ನಲ್ಲಿ ಗೆಲ್ಲಲು ಕೇವಲ 9 ರನ್ ಗಳ ಗುರಿಯಿತ್ತು. ಅದನ್ನು 1.4 ಓವರ್ ಗಳಲ್ಲಿಯೇ ವಿಕೆಟ್ ನಷ್ಟವಿಲ್ಲದೇ ಪೂರ್ತಿ ಮಾಡಿ ಗೆಲುವಿನ ನಗೆ ಬೀರಿತು. ಇದು ನ್ಯೂಜಿಲೆಂಡ್ ಗೆ ಟೆಸ್ಟ್ ಕ್ರಿಕೆಟ್ ನಲ್ಲಿ 100 ನೇ ಗೆಲುವು ಎನ್ನುವುದು ವಿಶೇಷ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ