ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಮಳೆಯಿಂದ ರದ್ದಾದ ಎರಡನೇ ದಿನದಾಟ

ಶುಕ್ರವಾರ, 21 ಫೆಬ್ರವರಿ 2020 (16:49 IST)
ಜಮ್ಮು ಕಾಶ್ಮೀರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಳೆಯದ್ದೇ ಆಟವಾಗಿದೆ. ಮೊದಲ ದಿನ ಕೇವಲ 6 ಓವರ್ ಗಳ ಆಟ ನಡೆದಿತ್ತು. ಆದರೆ ಎರಡನೇ ದಿನ ಸಂಪೂರ್ಣ ಮಳೆಗೆ ಆಹುತಿಯಾಗಿದೆ.


ನಿನ್ನೆಯ ದಿನದಂತ್ಯಕ್ಕೆ ಕರ್ನಾಟಕ 6 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿತ್ತು. ಆದರೆ ನಿನ್ನೆಯ ದಿನದಾಟ ಸರಿಯಾಗಿ ನಡೆದಿರಲಿಲ್ಲ. ಇಂದೂ ಕೂಡಾ ಮೈದಾನ ಸಂಪೂರ್ಣ ಒದ್ದೆಯಾಗಿದ್ದರಿಂದ ಪಂದ್ಯ ಒಂದೂ ಎಸೆತ ಕಾಣದೇ ದಿನದಾಟ ಕೊನೆಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ