ವೃದ್ಧಿಮಾನ್ ಸಹಾಗೂ ಗಾಯಕಿ ಶ್ರೇಯಾ ಘೋಷಾಲ್ ಗೆ ಎತ್ತಣ ಸಂಬಂಧ?!

ಶುಕ್ರವಾರ, 21 ಫೆಬ್ರವರಿ 2020 (09:53 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾರನ್ನು ಕೈಬಿಟ್ಟಿದ್ದರ ಬಗ್ಗೆ ಕಾಮೆಂಟೇಟರ್ ಹರ್ಷ ಭೋಗ್ಲೆ ತೀವ್ರ ಆಕ್ಷೇಪ ಹೊರಹಾಕಿದ್ದಾರೆ.


ವಿಶೇಷವೆಂದರೆ ಸಹಾರನ್ನು ಕೈಬಿಟ್ಟು ರಿಷಬ್ ಪಂತ್ ರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಭೋಗ್ಲೆ ಶ್ರೇಯಾ ಘೋಷಾಲ್ ರನ್ನೇ ಬಿಟ್ಟು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಹೋಲಿಸಿದ್ದಾರೆ.

‘ಇದು ನಿಜಕ್ಕೂ ಶಾಕ್. ಇನ್ಮುಂದೆ ಭಾರತದ ಎಲ್ಲಾ ಯುವ ವಿಕೆಟ್ ಕೀಪರ್ ಗಳೂ ವಿಕೆಟ್ ಹಿಂದುಗಡೆ ಚೆನ್ನಾಗಿ ಕೆಲಸ ಮಾಡುವುದನ್ನು ಬಿಟ್ಟು ರನ್ ಗಳಿಸುವುದರತ್ತ ಗಮನಹರಿಸಿದರೆ ಸಾಕು ಎಂದು ಸಂದೇಶ ಕೊಟ್ಟಂತಾಗಿದೆ. ಇನ್ನೊಬ್ಬ ಹುಡುಗಿ ಹಾಡುವುದರ ಜತೆಗೆ ಗಿಟಾರ್ ಕೂಡಾ ನುಡಿಸಬಲ್ಲಳು ಎಂಬ ಕಾರಣಕ್ಕೆ ಶ್ರೇಯಾ ಘೋಷಾಲ್ ರನ್ನೇ ಹೊರಗಿಟ್ಟು ಸಂಗೀತ ಕಾರ್ಯಕ್ರಮ ನಡೆಸಿದರೆ ಹೇಗಿರುತ್ತದೆ?’ ಎಂದು ಬೋಗ್ಲೆ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ