ಫೆಬ್ರವರಿ 16 ರಿಂದ ರಣಜಿ ಕ್ರಿಕೆಟ್ ಆರಂಭ

ಮಂಗಳವಾರ, 1 ಫೆಬ್ರವರಿ 2022 (09:59 IST)
ಮುಂಬೈ: ಕೊನೆಗೂ ಈ ವರ್ಷ ರಣಜಿ ಕ್ರಿಕೆಟ್ ಆಯೋಜಿಸಲು ಮನಸ್ಸು ಮಾಡಿರುವ ಬಿಸಿಸಿಐ ಫೆಬ್ರವರಿ 16 ರಿಂದ ಮಾರ್ಚ್ 5 ರವರೆಗೆ ನಡೆಸಲು ನಿರ್ಧರಿಸಿದೆ.

ಕೋಲ್ಕೊತ್ತಾ, ಚೆನ್ನೈ, ಅಹಮ್ಮದಾಬಾದ್ ಮತ್ತು ಕಟಕ್ ನಲ್ಲಿ ಎಲೈಟ್ ಗುಂಪಿನ ಪಂದ್ಯಗಳು ನಡೆಯಲಿವೆ. ನಾಲ್ಕು ತಂಡಗಳ ಎಂಟು ಗುಂಪುಗಳು ಈ ಬಾರಿ ಪಂದ್ಯಾವಳಿಯ ಭಾಗವಾಗಲಿದೆ.

ಈ ಮೊದಲು ರಣಜಿ ಕ್ರಿಕೆಟ್ ರದ್ದು ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ದೇಶೀಯ ಕ್ರಿಕೆಟಿಗರಿಂದ ಒತ್ತಡ ಬಂದಿದ್ದರಿಂದ ಬಿಸಿಸಿಐ ಮತ್ತೆ ರಣಜಿ ಆಯೋಜಿಸಲು ತೀರ್ಮಾನಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ