ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ವಿರಾಟ್ ಕೊಹ್ಲಿ
ತಂಡದಲ್ಲಿ ನಾಯಕನಾಗಿರಬೇಕೆಂದರೆ ಕ್ಯಾಪ್ಟನ್ ಎಂದ ಪಟ್ಟದ ಅಗತ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಮೇಲೆ ಕೊಹ್ಲಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಎಂಎಸ್ ಧೋನಿಯನ್ನು ನೋಡಿ. ಅವರಿಗೆ ನಾಯಕತ್ವದ ಪಟ್ಟವಿದ್ದರೂ ಇಲ್ಲದೇ ಇದ್ದರೂ ಅವರು ನಾಯಕನಾಗಿಯೇ ಇದ್ದರು. ಅವರ ಬಳಿ ಏನೇ ಇದ್ದರೂ ಹಂಚಿಕೊಳ್ಳಬಹುದಿತ್ತು. ನನಗೂ ಹಾಗೆಯೇ ಅನಿಸುತ್ತಿದೆ. ಕ್ಯಾಪ್ಟನ್ ಎಂಬ ಕಿರೀಟವಿಲ್ಲದಿದ್ದರೂ ತಂಡಕ್ಕಾಗಿ ನೀವು ನಾಯಕನ ರೀತಿ ಯೋಚಿಸುವುದೇ ನಾಯಕತ್ವ ಅಂದುಕೊಂಡಿದ್ದೇನೆ. ಕ್ಯಾಪ್ಟನ್ ಎಂಬ ಸ್ಥಾನಕ್ಕೆ ಸಮಯ ನಿಗದಿಯಿದೆ. ಆದರೆ ನಾಯಕತ್ವದ ಭಾವನೆಗಿಲ್ಲ. ನನಗೆ ತಂಡವನ್ನು ಗೆಲ್ಲಿಸುವುದೇ ಗುರಿ ಎಂದಿದ್ದಾರೆ.