ಟೀಂ ಇಂಡಿಯಾ ಕೋಚ್ ಆಗಿ ಈ ಒಂದು ಬೇಸರ ರವಿಶಾಸ್ತ್ರಿಗೆ ಕಾಡಿದೆಯಂತೆ!
ಅದು ತಮ್ಮ ಅವಧಿಯಲ್ಲಿ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಪ್ರಶಸ್ತಿ ಗೆಲ್ಲಲಿಲ್ಲ ಎನ್ನುವುದು. ಹಾಗಂತ ತನಗೆ ಈ ವಿಚಾರಕ್ಕೆ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ ರವಿಶಾಸ್ತ್ರಿ.
ಗೆಲ್ಲಲಿಲ್ಲ ಎನ್ನುವ ಬೇಸರವಿದೆ. ಆದರೆ ನನಗೆ ಸಿಕ್ಕ ತಂಡ ಅತ್ಯದ್ಭುತವಾಗಿತ್ತು. ನಾವು ಒಂದೆರಡು ಐಸಿಸಿ ಪ್ರಶಸ್ತಿ ಗೆಲ್ಲಬಹುದಿತ್ತು. ಆದರೆ ವೈಟ್ ಬಾಲ್ ನಲ್ಲಿ ಇದು ಸಾಮಾನ್ಯ. ಈ ವಿಶ್ವಕಪ್ ನಲ್ಲಿ ಆದಂತೆ ಆರಂಭ ಉತ್ತಮವಾಗಿಲ್ಲದೇ ಹೋದರೆ ಹಿಂದೆ ಬೀಳುವುದು ಸಹಜ ಎಂದು ರವಿಶಾಸ್ತ್ರಿ ಖಾಸಗಿ ಮಾಧ‍್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.