ಟಿ20 ವಿಶ್ವಕಪ್: ಪಾಕ್ ಸೋಲಿಗೆ ಕಾರಣವಾದ ಕ್ಯಾಚ್!
ಗೆಲ್ಲಲು 177 ರನ್ ಗಳನ್ನು ಚೇಸ್ ಮಾಡುತ್ತಿದ್ದ ಆಸ್ಟ್ರೇಲಿಯಾಗೆ ಕೊನೆಯ ಎರಡು ಓವರ್ ಗಳಲ್ಲಿ 22 ರನ್ ಗಳಿಸಬೇಕಾದ ಒತ್ತಡವಿತ್ತು. ಈ ವೇಳೆ ಕ್ರೀಸ್ ನಲ್ಲಿ ಹೊಡೆಬಡಿಯ ಆಟವಾಡುತ್ತಿದ್ದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ನೀಡಿದ ಕ್ಯಾಚ್ ನ್ನು ಪಾಕ್ ಫೀಲ್ಡರ್ ಹಸನ್ ಅಲಿ ಹಿಡಿಯುವಲ್ಲಿ ವಿಫಲರಾದರು.
ಈ ಕ್ಯಾಚ್ ಡ್ರಾಪ್ ಆಗಿದ್ದೇ ತಮ್ಮ ತಂಡ ಸೋಲಲು ಕಾರಣವಾಯಿತು ಎಂದು ಬಾಬರ್ ಅಜಮ್ ಹೇಳಿಕೊಂಡಿದ್ದಾರೆ. ಎಲ್ಲವೂ ಲೆಕ್ಕಾಚಾರದಂತೇ ನಡೆಯುತ್ತಿತ್ತು. ಆದರೆ ಕೊನೆಯಲ್ಲಿ ಕ್ಯಾಚ್ ಬಿಟ್ಟಿದ್ದೇ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.