ಕೊಹ್ಲಿಗೆ ತಲೆಬಾಗಿದ ಬಿಸಿಸಿಐ: ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ..?

ಮಂಗಳವಾರ, 11 ಜುಲೈ 2017 (16:55 IST)
ಅಂತೂ ಇಂತೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಠಕ್ಕೆ ಬಿಸಿಸಿಐ ತಲೆಬಾಗಿದೆ. ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಅವರನ್ನ ನೇಮಕ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
.

ರವಿಶಾಸ್ತ್ರೀ ಅವರನ್ನ ಭಾರತದ ಸಲಹಾ ಸಮಿತಿ ಸದಸ್ಯರಾದ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಸಂದರ್ಶನ ಮಾಡಿದ್ದರು. ಇದೀಗ, ಕೋಚ್ ರೇಸ್`ನಲ್ಲಿದ್ದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಸೇರಿದಂತೆ 6 ಮಂದಿಯಲ್ಲಿ ವಿರಾಟ್ ಕೊಹ್ಲಿ ಆಶಯದಂತೆ ರವಿಶಾಸ್ತ್ರೀ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ.

ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆದ ಬಳಿಕ ಚರ್ಚಿಸಿ ಕೋಚ್ ಹೆಸರನ್ನ ಪ್ರಕಟಿಸುವುದಾಗಿ ಸೌರವ್ ಗಂಗೂಲಿ ಹೇಳಿದ್ದರು. ಆದರೆ, ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ ಇವತ್ತೇ ಹೆಸರನ್ನ ಘೋಷಿಸುವಂತೆ ಸೂಚಿಸಿತ್ತು. ಇದರನ್ವಯ ವಿರಾಟ್ ಕೊಹ್ಲಿಯನ್ನ ಸಂಪರ್ಕಿಸಿದ್ದ ಬಿಸಿಸಿಐ ಸಮಿತಿ ಮಾತುಕತೆ ನಡೆಸಿ ಶಾಸ್ತ್ರೀ ಹೆಸರನ್ನ ಅಂತಿಮಗೊಳಿಸಿದೆ. 2019ರ ವಿಶ್ವಕಪ್`ವರೆಗೆ ಟೀಮ್ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮುಂದುವರೆಯಲಿದ್ದಾರೆ.

ಅನಿಲ್ ಕುಂಬ್ಳೆ ಆಯ್ಕೆಯಾದಾಗಿನಿಂದ ಕುಂಬ್ಳೆ ಜೊತೆ ಕೊಹ್ಲಿ ಸಂಬಂದ ಸರಿ ಇರಲಿಲ್ಲ. ಕಳೆದೊಂದು ವರ್ಷದಿಂದ ಕುಂಬ್ಳೆ ಸ್ಥಾನಕ್ಕೆ ರವಿಶಾಸ್ತ್ರಿಯವರನ್ನ ಆಯ್ಕೆ ಮಾಡುವಂತೆ ಪಟ್ಟು ಹಿಡಿದಿದ್ದರು. ಟೀಮ್ ಇಂಡಿಯಾ ನಿರ್ದೇಶಕರಾಗಿ ರವಿಶಾಸ್ತ್ರಿ ಸಾಧನೆ ಗಮನಾರ್ಹವಾಗಿತ್ತು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ