ರೋಹಿತ್ ಶರ್ಮಾ ಈಗ ಡುಮ್ಮ ಅಲ್ಲ, 20 ಕೆಜಿ ತೂಕ ಇಳಿಸಿದ್ದು ಹೇಗೆ ಗೊತ್ತಾ

Krishnaveni K

ಮಂಗಳವಾರ, 2 ಸೆಪ್ಟಂಬರ್ 2025 (11:56 IST)
Photo Credit: X
ಮುಂಬೈ: ಇಷ್ಟು ದಿನ ತಮ್ಮ ದೇಹ ಗಾತ್ರಕ್ಕೆ ಸಂಬಂಧಿಸಿದಂತೆ ಟೀಕೆಗೊಳಗಾಗುತ್ತಿದ್ದ ರೋಹಿತ್ ಶರ್ಮಾ ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ಡಯಟ್ ಪ್ಲ್ಯಾನ್ ಹೇಗಿದೆ ಎನ್ನುವ ಫೋಟೋವೊಂದು ಈಗ ವೈರಲ್ ಆಗಿದೆ.

ರೋಹಿತ್ ಶರ್ಮಾರನ್ನು ಮೊನ್ನೆಯಷ್ಟೇ ಫಿಟ್ನೆಸ್ ಟೆಸ್ಟ್ ಮುಗಿಸಿ ಮುಂಬೈಗೆ ಮರಳುತ್ತಿದ್ದಾಗ ನೋಡಿದ ಫ್ಯಾನ್ಸ್ ನಿಜಕ್ಕೂ ಶಾಕ್ ಆಗಿದ್ದರು. ಏಕ್ ದಂ ಫಿಟ್ ಆಂಡ್ ಫೈನ್ ಆಗಿ ರೋಹಿತ್ ಕಾಣಿಸಿಕೊಂಡಿದ್ದರು. ಅವರ ಹೊಟ್ಟೆಯ ಗಾತ್ರವೂ ಕಡಿಮೆಯಾಗಿತ್ತು.

ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಇದೀಗ ಕ್ರಿಕೆಟ್ ನಿಂದ ಕೊಂಚ ಬ್ರೇಕ್ ಪಡೆದಿರುವ ರೋಹಿತ್ ಈ ಸಮಯದಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಇನ್ನಿಲ್ಲದ ಕಾಳಜಿ ಮಾಡಿದ್ದಾರಂತೆ. ಇದಕ್ಕಾಗಿ ಅವರು ಕಟ್ಟುನಿಟ್ಟಿನ ಆಹಾರ ಶೈಲಿಯ ರೂಢಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೋಹಿತ್ ಡಯಟ್ ಪ್ಲ್ಯಾನ್ ಹೀಗಿದೆ
ಬೆಳಿಗ್ಗೆ 7.00 ಗಂಟೆಗೆ ನೆನೆಸಿದ ಬಾದಾಮಿ, ಮೊಳಕೆ ಕಾಳು, ಸಲಾಡ್, ಒಂದು ಗ್ಲಾಸ್ ಫ್ರೆಶ್ ಜ್ಯೂಸ್ ಸೇವನೆ ಮಾಡುತ್ತಾರೆ.
ಬೆಳಿಗ್ಗೆ 9.30 ಕ್ಕೆ ಓಟ್ ಮೀಲ್, ಹಣ್ಣುಗಳನ್ನು ಒಳಗೊಂಡ ಬ್ರೇಕ್ ಫಾಸ್ಟ್, ಒಂದು ಗ್ಲಾಸ್ ಹಾಲು
ಬೆಳಿಗ್ಗೆ 11.30 ಕ್ಕೆ: ಮೊಸರು, ಚಿಕ್ಕ, ಎಳೆನೀರು.
ಮಧ್ಯಾಹ್ನ 1.30: ತರಕಾರಿ ಕರಿ, ದಾಲ್, ಅನ್ನ, ಸಲಾಡ್.
ಸಂಜೆ 4.30 ಕ್ಕೆ: ಫ್ರೂಟ್ ಸ್ಮೂತಿ, ಒಣ ಹಣ್ಣುಗಳು.
ರಾತ್ರಿ 7.30 ಕ್ಕೆ: ತರಕಾರಿಗಳೊಂದಿಗೆ ಪನೀರ್, ಪುಲಾವ್, ವೆಜಿಟೇಬಲ್ ಸೂಪ್.
ರಾತ್ರಿ 9.30 ಕ್ಕೆ: ಒಂದು ಗ್ಲಾಸ್ ಹಾಲು, ಮಿಕ್ಸೆಡ್ ನಟ್ಸ್.

ರೋಹಿತ್ ಡಯಟ್ ಪ್ಲ್ಯಾನ್ ಈ ರೀತಿ ಇರುತ್ತದೆ ಎಂದು ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಸತತ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ