ರೋಹಿತ್ ನಾಯಕತ್ವದಲ್ಲಿ ಸ್ಪಿನ್ನರ್ ಅಶ್ವಿನ್ ಗೆ ಅದೃಷ್ಟ
 
ಹಿಂದೆ ಯುವ ಸ್ಪಿನ್ನರ್ ಗಳನ್ನು ಮುಂದಿಟ್ಟುಕೊಂಡು ಅಶ್ವಿನ್ ಗೆ ಕೊಹ್ಲಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಅವಕಾಶವೇ ನೀಡುತ್ತಿರಲಿಲ್ಲ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ರೋಹಿತ್ ಕೃಪೆಯಿಂದ ಅಶ್ವಿನ್ ಕಮ್ ಬ್ಯಾಕ್ ಮಾಡಿದರು.
									
				ಇದೀಗ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಅಶ್ವಿನ್ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ತಾವು ಸೀಮಿತ ಓವರ್ ಗಳಲ್ಲೂ ಎಷ್ಟು ಪರಿಣಾಮಕಾರಿ ಎಂಬುದನ್ನು ನಿರೂಪಿಸಿದ್ದಾರೆ. ಆ ಮೂಲಕ ಮತ್ತೆ ಅಶ್ವಿನ್ ಸೀಮಿತ ಓವರ್ ಗಳ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.