ಎರಡನೇ ದಿನದಾಟದಲ್ಲಿ ಶಿಸ್ತಿನ ಪ್ರದರ್ಶನ ನೀಡಿದ ಬೌಲರುಗಳನ್ನು ಮನಸಾರೆ ಶ್ಲಾಘಿಸಿದ ವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮ್ಮನ್ಸ್, ಇನ್ನುಳಿದ ಭಾರತದ ವಿಕೆಟ್‌ಗಳನ್ನು ಉರುಳಿಸಿದ ಬಳಿಕ, ಎರಡನೇ ಟೆಸ್ಟ್‌ನಲ್ಲಿ ಪುಟಿದೇಳಲು ಬ್ಯಾಟ್ಸ್‌ಮನ್‌ಗಳು ನೆರವಾಗಬೇಕೆಂದು ಹೇಳಿದರು.
ಭಾರತ ಎರಡನೇ ದಿನ 88 ಓವರುಗಳಲ್ಲಿ 232 ರನ್ ಮಾತ್ರ ಸ್ಕೋರ್ ಮಾಡಲು ಸಾಧ್ಯವಾಗಿ 358ಕ್ಕೆ 5 ವಿಕೆಟ್ ಉರುಳಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬೌಲರುಗಳು ಸಾಕಷ್ಟು ಸುಧಾರಿಸಿದ್ದಾರೆಂದು ಸಿಮ್ಮನ್ಸ್ ಹೇಳಿದರು. ನಾವು ಉತ್ತಮವಾಗಿ ಬೌಲ್ ಮಾಡಿದ್ದೇನೆಂದು ಎಣಿಸಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ 90 ಪೂರ್ಣ ಓವರಿನಲ್ಲಿ ಸರಾಸರಿ 270 ರನ್ ಸ್ಕೋರ್ ಮಾಡಬಹುದಾಗಿದ್ದು ನಾವು ಭಾರತ ತಂಡವನ್ನು ನಿಯಂತ್ರಿಸಿದ್ದೇವೆ. 90 ಓವರುಗಳಲ್ಲಿ ಅವರನ್ನು 230 ರನ್‌ಗೆ ನಿಯಂತ್ರಿಸಿದ್ದರಿಂದ ಆಂಟಿಗಾಗಿಂತ ಹೆಚ್ಚು ಸುಧಾರಣೆಯಾಗಿದ್ದನ್ನು ತೋರಿಸುತ್ತದೆ ಎಂದು ಸಿಮ್ಮನ್ಸ್ ಅಭಿಪ್ರಾಯಪಟ್ಟರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಸಹನೆಯಿಂದ ಇರಬೇಕೆಂದು ನಾನು ಕಳೆದ 6 ತಿಂಗಳಿಂದ ಹೇಳುತ್ತಿದ್ದ ವಿಷಯವನ್ನು ಬೌಲರುಗಳು ಇಂದು ಕಲಿತಿದ್ದಾರೆ. ವಿಕೆಟ್ ನಮಗೆ ನೆರವಾಗದಿದ್ದಾಗ ನಾವು ಸಹನೆಯಿಂದ ಬೌಲಿಂಗ್ ಮಾಡಬೇಕು. ಆಗ ಸಹನೆಯಿಂದ ನೀವು ತರುವ ಒತ್ತಡವು ವಿಕೆಟ್ ಗಳಿಸಿಕೊಡುತ್ತದೆ ಎಂದು ಹೇಳಿದರು. ಅಶ್ವಿನ್ ವಿಶ್ವದಲ್ಲೇ ನಂಬರ್ ಒನ್ ಬೌಲರ್. ಅವರ ಎಸೆತವನ್ನು ಯಾವುದೇ ವಿಕೆಟ್‌ನಲ್ಲಿ ಕೂಡ ಆಡುವುದು ಕಷ್ಟ ಎಂದು ಸಿಮ್ಮನ್ಸ್ ಅಭಿಪ್ರಾಯಪಟ್ಟರು.