ವಿಜಯ್ ಹಜಾರೆ ಟ್ರೋಫಿ ಫೈನಲ್: ಹೆಲ್ಮೆಟ್ ವಿವಾದಕ್ಕೆ ಗುರಿಯಾದ ರವಿಚಂದ್ರನ್ ಅಶ್ವಿನ್

ಶನಿವಾರ, 26 ಅಕ್ಟೋಬರ್ 2019 (09:28 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಕರ್ನಾಟಕ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಡುವಾಗ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಧರಿಸಿ ತಮಿಳುನಾಡು ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಆಗಿರುವ ತಮಿಳುನಾಡು ಮೂಲದ ಆರ್ ಅಶ್ವಿನ್ ತಮಿಳುನಾಡು ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಈ ವೇಳೆ ಅವರು ಧರಿಸಿದ್ದ ಹೆಲ್ಮೆಟ್ ನಲ್ಲಿ ಬಿಸಿಸಿಐ ಲೋಗೋ ಬಳಸಿದ್ದರು. ನಿಯಮದ ಪ್ರಕಾರ ದೇಶೀಯ ಪಂದ್ಯದಲ್ಲಿ ತಮ್ಮ ತವರು ರಾಜ್ಯವನ್ನು ಪ್ರತಿನಿಧಿಸುವಾಗ ಬಿಸಿಸಿಐ ಲೋಗೋ ಬಳಸುವಂತಿಲ್ಲ. ಒಂದು ವೇಳೆ ಅದೇ ಹೆಲ್ಮೆಟ್ ಧರಿಸಬೇಕಿದ್ದರೆ ಅದನ್ನು ಟ್ಯಾಪ್ ಮಾಡಿ ಮುಚ್ಚಿ ಬಳಸಬಹುದು.

ಆದರೆ ಅಶ್ವಿನ್ ಹಾಗೆ ಮಾಡಿರಲಿಲ್ಲ. ಹೀಗಾಗಿ ಅವರೀಗ ದಂಡ ಅಥವಾ ಇತರ ಶಿಸ್ತು ಕ್ರಮಕ್ಕೆ ಒಳಗಾಗುವ ಸಂಕಟದಲ್ಲಿದ್ದಾರೆ. ಹಾಗಿದ್ದರೂ ಅಶ್ವಿನ್ ಬ್ಯಾಟ್ ನಿಂದ ದೊಡ್ಡ ಕೊಡುಗೆಯೇನೂ ಕೊಟ್ಟಿರಲಿಲ್ಲ. ಕೇವಲ 8 ರನ್ ಗಳಿಗೆ ಔಟಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ