ಮಾಸ್ಟರ್ ಬ್ಲಾಸ್ಟರ್ ಸನತ್ ಜಯಸೂರ್ಯ ಮೆಚ್ಚುಗೆಗೆ ಪಾತ್ರರಾದ ಅಶ್ವಿನ್

ಗುರುವಾರ, 27 ಆಗಸ್ಟ್ 2015 (17:00 IST)
ದ್ವೀಪ ರಾಷ್ಟ್ರದಿಂದ ಹೊರಹೊಮ್ಮುತ್ತಿರುವ ಹೊಸ ಬ್ಯಾಟ್ಸ್‌ಮನ್‌ಗಳು ಗುಣಮಟ್ಟದ ಸ್ಪಿನ್ನರ್‌ಗಳನ್ನು ನಿಭಾಯಿಸುವ ತಮ್ಮ ಸಾಮರ್ಥ್ಯದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿಲ್ಲ ಎಂದು ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಅಮಿತ್ ಮಿಶ್ರಾ ತಮ್ಮ ಸ್ಪಿನ್ ದಾಳಿಯಿಂದ ಶ್ರೀಲಂಕಾ ತಂಡವನ್ನು ತೊಂದರೆಗೀಡು ಮಾಡಿದ್ದನ್ನು ಕುರಿತು ಅವರು ಹೇಳುತ್ತಿದ್ದರು.
 
ಪ್ರಸಕ್ತ ಏಷ್ಯನ್ ಬ್ಯಾಟ್ಸ್‌ಮನ್‌ಗಳಲ್ಲಿ ತಾಂತ್ರಿಕ ದೋಷವಿದೆಯೇ ಎಂಬ ಪ್ರಶ್ನೆಗೆ , ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಬೌಲಿಂಗ್ ವಿರುದ್ಧ ಹೆಚ್ಚು ತಿಣುಕುತ್ತಿದ್ದಾರೆ. ನಾವು ಸ್ಪಿನ್ ಉತ್ತಮವಾಗಿ ಆಡುತ್ತೇವೆಂದು ಭಾವಿಸಿದ್ದೇವೆ. ಆದರೆ ನಾವು ಸ್ಪಿನ್‌ ಆಡುವುದರಲ್ಲಿ ಉತ್ತಮವಾಗಿಲ್ಲ. ಏಕೆಂದರೆ ಎರಡೂ ತಂಡಗಳಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ ಎಂದು ಜಯಸೂರ್ಯ ಹೇಳಿದರು. 
 
ಭಾರತದ ಕಡೆ ಅಶ್ವಿನ್, ಅಮಿತ್ ಮಿಶ್ರಾ ಮತ್ತು ಹರ್ಭಜನ್ ಇದ್ದರೆ ಶ್ರೀಲಂಕಾದಲ್ಲಿ ರಂಗನಾಥ್ ಹೆರಾಥ್ ಮತ್ತು ಕೌಶಲ್ ಇದ್ದಾರೆ. ಹೆರಾತ್ ಲಂಕಾ ಯಶಸ್ಸಿಗೆ ಇತ್ತೀಚಿನ ಸರಣಿಯಲ್ಲಿ ಮುಖ್ಯರಾಗಿದ್ದಾರೆ ಎಂದು ಹೇಳಿದರು. 
 
ತ್ಯಾಗರಾಜ್ ಸ್ಫೋರ್ಟ್ಸ್ ಸಂಕೀರ್ಣದಲ್ಲಿ ಸ್ಟೇರ್ಸ್ ಸ್ಕೂಲ್ ಫುಟ್‌ಬಾಲ್ ಲೀಗ್ ಆರಂಭದ ನೇಪಥ್ಯದಲ್ಲಿ ಅವರು ಮಾಧ್ಯಮದ ಜತೆ ಅವರು ಮಾತನಾಡುತ್ತಿದ್ದರು. 
 ವಿಶೇಷವಾಗಿ ಅಶ್ವಿನ್ ಹೆಸರನ್ನು ಪ್ರಸ್ತಾಪಿಸಿದ ಜಯಸೂರ್ಯ , ಅಶ್ವಿನ್ ಚೆನ್ನಾಗಿ ಬೌಲ್ ಮಾಡಿದ್ದಾರೆ. ಅವರು ಉತ್ತಮ ಬೌಲರ್ ಆಗಿ ರೂಪುಗೊಂಡಿದ್ದಾರೆನ್ನುವುದು ದಾಖಲೆ ತೋರಿಸುತ್ತದೆ ಎಂದು ಜಯಸೂರ್ಯಾ ಹೇಳಿದರು. 

ವೆಬ್ದುನಿಯಾವನ್ನು ಓದಿ