ಇಂದು ಕ್ರಿಕೆಟಿಗ ರವೀಂದ್ರ ಜಡೇಜಾ- ರೀವಾ ಸೋಲಂಕಿ ನಿಶ್ಚಿತಾರ್ಥ

ಶುಕ್ರವಾರ, 5 ಫೆಬ್ರವರಿ 2016 (17:23 IST)
ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ, ಇಂದು ರಾಜ್‌ಕೋಟ್ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ರೀವಾ ಸೋಲಂಕಿಯವರೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 
ಜಡೇಜಾ ರೆಸ್ಟುರಾಂಟ್‌ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೀವಾ ಆತ್ಮಿಯಾ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದು, ಯುಪಿಎಸ್‌ಸಿ ಪರೀಕ್ಷೆಗಾಗಿ ದೆಹಲಿಯಲ್ಲಿ ಸಿದ್ದತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಸೋಮುವಾರದಂದು ಮತ್ತೊಬ್ಬ ಕ್ರಿಕೆಟಿಗ ವರುಣ್ ಆರೋನ್ ತಮ್ಮ ಬಾಲ್ಯದ ಗೆಳತಿ ರಾಗಿಣಿಯನ್ನು ಜೆಮ್‌ಶೆಡ್‌ಪುರ್ ಕೋರ್ಟ್‌ನಲ್ಲಿ ವಿವಾಹವಾಗಿದ್ದರು.   
 
ಇತ್ತೀಚೆಗೆ, ಹರಭಜನ್ ಸಿಂಗ್, ಅಜಿಂಕ್ಯ ರೆಹಾನೆ, ಆರ್‌.ಅಶ್ವಿನ್, ದಿನೇಶ್ ಕಾರ್ತಿಕ್ ಮತ್ತು ರೋಹಿತ್ ಶರ್ಮಾ ಸಪ್ತಪದಿಯನ್ನು ತುಳಿದಿದ್ದಾರೆ. 
 
ಯುವರಾಜ್ ಸಿಂಗ್ ಕೂಡಾ ಮಾಡೆಲ್ ಕಂ ನಟಿ ಹಾಜೆಲ್ ಕೀಚ್ ಅವರೊಂದಿಗೆ ನವೆಂಬರ್ 2015ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ