ರವೀಂದ್ರ ಜಡೇಜಾ ಭರ್ಜರಿ ಸ್ಪಿನ್ : ದಕ್ಷಿಣ ಆಫ್ರಿಕಾ 121 ರನ್‌ಗೆ ಆಲೌಟ್

ಶುಕ್ರವಾರ, 4 ಡಿಸೆಂಬರ್ 2015 (17:32 IST)
ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಅಂಜಿಕ್ಯಾ ರಹಾನೆ ಅವರ ಶತಕದ ನೆರವಿಂದ ಭಾರತ 334 ರನ್ ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು  ಮತ್ತೊಮ್ಮೆ ಸ್ಪಿನ್ ದಾಳಿಗೆ ನಲುಗಿ ಕೇವಲ 121 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸ್ಪಿನ್ ಬೌಲರುಗಳಲ್ಲಿ ಸಮರ್ಥವಾಗಿ ಎದುರಿಸುವಲ್ಲಿನ ಅವರ ವೈಫಲ್ಯವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಿಚ್ ಕಳಪೆಯಾಗಿತ್ತು ಎಂದು ಐಸಿಸಿ ಆರೋಪಿಸಿತ್ತು. ಆದರೆ ದೆಹಲಿ ಟೆಸ್ಟ್‌ನಲ್ಲಿ ದ. ಆಫ್ರಿಕಾ ಕಡಿಮೆ ಮೊತ್ತಕ್ಕೆ ಔಟಾಗಿದ್ದನ್ನು ಗಮನಿಸಿದರೆ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಅವರ ವೈಫಲ್ಯವನ್ನು ಬಿಂಬಿಸಿದೆ.  ದ.ಆಫ್ರಿಕಾ ಪರ ಡಿ. ವಿಲಿಯರ್ಸ್ 42 ರನ್ ಮತ್ತು ಬಹುಮಾ 22 ರನ್ ಮತ್ತು ಎಲ್ಗರ್ 17 ರನ್ ಬಾರಿಸಿದರು. ಉಳಿದ ಆಟಗಾರರು ಎರಡಂಕಿ ದಾಟಲು ವಿಫಲರಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. 
 
ಭಾರತ ಪರ ರವೀಂದ್ರ ಜಡೇಜಾ 5 ವಿಕೆಟ್ ಗಳನ್ನು ಕಬಳಿಸಿದರೆ. ಆರ್. ಅಶ್ವಿನ್, ಉಮೇಶ್ ಯಾದವ್ ತಲಾ 2 ವಿಕೆಟ್ ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಗಳಿಸಿದರು. 
 ಮೊದಲ ಇನ್ನಿಂಗ್ಸ್‌ನಲ್ಲಿ ಅಂಜಿಕ್ಯಾ ರಹಾನೆ ಅವರ ಅಮೋಘ ಶತಕದಿಂದ ಭಾರತ 344 ರನ್ ಗಳಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಸ್ಪಿನ್ ಬೌಲಿಂಗ್ ಆಡುವುದಕ್ಕೆ ತಿಣುಕಾಡಿ ಕೇವಲ 121 ರನ್‌ಗಳಿಗೆ ಆಲೌಟ್ ಆಗಿದೆ. 

ವೆಬ್ದುನಿಯಾವನ್ನು ಓದಿ