ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

Krishnaveni K

ಶನಿವಾರ, 30 ಆಗಸ್ಟ್ 2025 (11:32 IST)
ಬೆಂಗಳೂರು: ಐಪಿಎಲ್ ಫೈನಲ್ ಗೆದ್ದ ಬಳಿಕ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಕುಟುಂಬಕ್ಕೆ ಆರ್ ಸಿಬಿ ತಂಡ ತಲಾ 25 ಲಕ್ಷ ರೂ.ಗಳ ನೆರವು ನೀಡಿದೆ.

ಜೂನ್ 4 ರಂದು ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಘಟನೆ ಬಳಿಕ ಆರ್ ಸಿಬಿ ಬರೋಬ್ಬರಿ 3 ತಿಂಗಳು ಸೋಷಿಯಲ್ ಮೀಡಿಯಾದಿಂದಲೇ ದೂರವುಳಿದಿತ್ತು. ಇದೀಗ ಮೊನ್ನೆಯಷ್ಟೇ ಆರ್ ಸಿಬಿ ಅಭಿಮಾನಿಗಳಿಗೆ ಮೊದಲ ಸಂದೇಶ ನೀಡಿತ್ತು. ಜೊತೆಗೆ ಆರ್ ಸಿಬಿ ಕೇರ್ಸ್ ಎನ್ನುವ ನಿಧಿ ಸ್ಥಾಪನೆ ಮಾಡಿರುವುದಾಗಿಯೂ ಹೇಳಿತ್ತು.

ಅದರಂತೆ ಈಗ ಆರ್ ಸಿಬಿ ಕೇರ್ಸ್ ವತಿಯಿಂದ ಮಡಿದ ಅಭಿಮಾನಿಗಳ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೆರವು ನೀಡಿದೆ. ಆ 11 ಜನ ಅಭಿಮಾನಿಗಳನ್ನಷ್ಟೇ ಅಲ್ಲ ನಾವು ಕಳೆದುಕೊಂಡಿದ್ದು. ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸೂಚಕವಾಗಿ ಆರ್ ಸಿಬಿ ಪ್ರತೀ ಕುಟುಂಬಕ್ಕೆ25 ಲಕ್ಷ ರೂ. ನೆರವು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ, ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ. ಇದು ಆರ್ ಸಿಬಿ ಕೇರ್ಸ್ ನ ಆರಂಭವೂ ಹೌದು. ಅವರ ನೆನಪುಗಳನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ’ ಎಂದು ಆರ್ ಸಿಬಿ ಪ್ರಕಟಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ