ಗಂಗೂಲಿ-ಸಚಿನ್ ದಾಖಲೆ ಸರಿಗಟ್ಟಲು ಮುಂದಾದ ರೋಹಿತ್-ಶಿಖರ್ ಜೋಡಿ

ಶುಕ್ರವಾರ, 26 ಮಾರ್ಚ್ 2021 (12:20 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಸಚಿನ್-ಗಂಗೂಲಿ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ.


ಆರಂಭಿಕರಾಗಿ ಯಶಸ್ವೀ ಜೋಡಿಯೆನಿಸಿದ ಶಿಖರ್-ರೋಹಿತ್ ಇಂದು ಮೊದಲ ವಿಕೆಟ್ ಗೆ 89 ರನ್ ಜೊತೆಯಾಟವಾಡಿದರೆ ಏಕದಿನ ಪಂದ್ಯಗಳಲ್ಲಿ 5000 ಪ್ಲಸ್ ರನ್ ಗಳನ್ನು ಆರಂಭಿಕರಾಗಿ ಕಲೆ ಹಾಕಿದ ದಾಖಲೆ ಮಾಡಲಿದ್ದಾರೆ.

ಇದಕ್ಕೂ ಮೊದಲು ಒಂದು ಕಾಲದ ಯಶಸ್ವೀ ಜೋಡಿಯೆನಿಸಿದ್ದ ಗಂಗೂಲಿ-ಸಚಿನ್ ಈ ದಾಖಲೆ ಮಾಡಿದ್ದರು. ಇಂದು ಶಿಖರ್-ರೋಹಿತ್ ಈ ದಾಖಲೆ ಮಾಡಿದರೆ ಸಚಿನ್-ಗಂಗೂಲಿ ಬಳಿಕ ಭಾರತದ ಅತ್ಯಂತ ಯಶಸ್ವೀ ಆರಂಭಿಕರೆನಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ