ವಿರಾಟ್ ನಾಯಕತ್ವ ಬಿಡದಂತೆ ಸೂಚಿಸಿದ್ದೆವು: ಮುಖ್ಯ ಆಯ್ಕೆಗಾರ!
ಗಂಗೂಲಿ ಹೇಳಿಕೆ ಬೆನ್ನಲ್ಲೇ ಕೊಹ್ಲಿ ನನಗೆ ಯಾರೂ ನಾಯಕತ್ವ ಬಿಡದಂತೆ ಸೂಚಿಸಿರಲಿಲ್ಲ. ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಸುತ್ತಿರುವುದಾಗಿ ಕೇವಲ 90 ನಿಮಿಷಗಳ ಮೊದಲು ಹೇಳಿದ್ದರು ಎಂದು ವಿವಾದ ಸೃಷ್ಟಿಸಿದ್ದರು.
ಆದರೆ ಈಗ ಮುಖ್ಯ ಆಯ್ಕೆಗಾರರೂ ಗಂಗೂಲಿ ಹೇಳಿಕೆಯನ್ನೇ ಪುನರುಚ್ಚರಿಸುತ್ತಿದ್ದಾರೆ. ಟಿ20 ನಾಯಕತ್ವ ಬಿಡದಂತೆ ಸೂಚಿಸಿದ್ದೆವು. ಆದರೆ ಅವರು ಬಿಟ್ಟಾಗ ಅನಿವಾರ್ಯವಾಗಿ ಏಕದಿನ ನಾಯಕತ್ವದಿಂದಲೂ ಕಿತ್ತು ಹಾಕಲಾಯಿತು. ಈ ಬಗ್ಗೆ ಖುದ್ದು ನಾನೇ 90 ನಿಮಿಷಗಳ ಮೊದಲು ಕೊಹ್ಲಿಗೆ ಕರೆ ಮಾಡಿ ಮಾತನಾಡಿದ್ದೆ ಎಂದಿದ್ದಾರೆ.