ರಿಕಿ ಪಾಂಟಿಂಗ್ ಗೆ ಕೋಚ್ ಆಫರ್ ನೀಡಿದ್ದ ಬಿಸಿಸಿಐ

ಸೋಮವಾರ, 18 ಅಕ್ಟೋಬರ್ 2021 (11:20 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ತೀವ್ರ ಪ್ರಯತ್ನ ನಡೆಸಿದ್ದು, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ರನ್ನು ಸಂಪರ್ಕಿಸಲಾಗಿತ್ತು ಎಂಬ ಸುದ್ದಿಯಿದೆ.


ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಯಶಸ್ವಿಯಾಗಿರುವ ಪಾಂಟಿಂಗ್ ರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಿಸಲು ಬಿಸಿಸಿಐ ಆಫರ್ ನೀಡಿತ್ತು. ಆದರೆ ಪಾಂಟಿಂಗ್ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿರುವ ಕಾರಣಕ್ಕೆ ಟೀಂ ಇಂಡಿಯಾ ಕೋಚ್ ಹುದ್ದೆಯ ಜವಾಬ್ಧಾರಿ ಸದ್ಯಕ್ಕೆ ಬೇಡ ಎಂದು ಪಾಂಟಿಂಗ್ ತೀರ್ಮಾನಿಸಿದರು ಎನ್ನಲಾಗಿದೆ.

ಹೀಗಾಗಿ ಕೊನೆಗೆ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಿತು. ಒತ್ತಡಕ್ಕೆ ಮಣಿದು ದ್ರಾವಿಡ್ ಕೋಚ್ ಆಗಲು ಒಪ್ಪಿದ್ದಾರೆ ಎಂಬ ಸುದ್ದಿಗಳಿವೆ. ಇದರ ಬಗ್ಗೆ ಇನ್ನೂ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ