ಟಿ20 ವಿಶ್ವಕಪ್ ನಲ್ಲಿಂದು ಭಾರತಕ್ಕೆ ಮೊದಲ ಅಭ್ಯಾಸ ಪಂದ್ಯ

ಸೋಮವಾರ, 18 ಅಕ್ಟೋಬರ್ 2021 (08:45 IST)
ದುಬೈ: ಟಿ20 ವಿಶ್ವಕಪ್ ಕೂಟಕ್ಕೆ ಚಾಲನೆ ಸಿಕ್ಕಿದ್ದು, ಇಂದು ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.


ಭಾರತ ಒಟ್ಟು ಎರಡು ಅಭ್ಯಾಸ ಪಂದ್ಯವನ್ನು ಆಡಲಿದ್ದು, ಮೊದಲ ಪಂದ್ಯದಲ್ಲಿ ಇಂದು ಇಂಗ್ಲೆಂಡ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಬುಧವಾರ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ವಿಶೇಷವೆಂದರೆ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಾಯಕರು ಮೊದಲ ಟಿ20 ವಿಶ್ವಕಪ್ ಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಉಭಯ ನಾಯಕರಿಗೆ ಈ ಅಭ್ಯಾಸ ಪಂದ್ಯ ಮಹತ್ವದ್ದಾಗಿದೆ. ಈಗಷ್ಟೇ ಐಪಿಎಲ್ ಮುಗಿಸಿ ಬಂದಿರುವ ಆಟಗಾರರು ಮತ್ತೆ ರಾಷ್ಟ್ರೀಯ ತಂಡದಲ್ಲಿ ಒಟ್ಟಾಗಿ ಆಡುತ್ತಿದ್ದು, ಮಹತ್ವದ ಟೂರ್ನಿಗೆ ಮೊದಲು ತಯಾರಾಗಲು ಉತ್ತಮ ವೇದಿಕೆ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ