ಟೀಂ ಇಂಡಿಯಾ ಕೋಚ್ ಹುದ್ದೆ ಬೇಡ ಎಂದಿದ್ಯಾಕೆ? ಸತ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್

ಶುಕ್ರವಾರ, 19 ನವೆಂಬರ್ 2021 (09:20 IST)
ಮುಂಬೈ: ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಬಿಸಿಸಿಐ ಮೊದಲು ಆಸೀಸ್ ಮಾಜಿ ಆಟಗಾರ ರಿಕಿ ಪಾಂಟಿಂಗ್ ರನ್ನು ಸಂಪರ್ಕಿಸಿತ್ತು. ಆದರೆ ಪಾಂಟಿಂಗ್ ನಿರಾಕರಿಸಿದ್ದರು. ಇದಕ್ಕೆ ಕಾರಣವೇನೆಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಐಪಿಎಲ್ ವೇಳೆ ಕೆಲವರು ನನ್ನಲ್ಲಿ ಕೋಚ್ ಹುದ್ದೆ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ಅವರು ವರ್ಷದ 300 ದಿನ ಭಾರತದಲ್ಲೇ ಇರಬೇಕು ಎಂದರು. ಐಪಿಎಲ್ ಕೋಚ್ ಹುದ್ದೆ ಬಿಡಬೇಕೆಂದರು. ಅಲ್ಲದೆ, ನನ್ನ ಚಾನೆಲ್ ಕಾರ್ಯಕ್ರಮವನ್ನೂ ಬಿಡಬೇಕೆಂದು ಹಠ ಹಿಡಿದರು. ಇದೆಲ್ಲಾ ಸಾಧ‍್ಯವಾಗದ ಮಾತು ಎಂದು ನಾನು ಕೋಚ್ ಆಗಲು ನಿರಾಕರಿಸಿದೆ’ ಎಂದಿದ್ದಾರೆ.

ಇದಾದ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ವತಃ ರಾಹುಲ್ ದ್ರಾವಿಡ್ ರನ್ನು ಕೋಚ್ ಹುದ್ದೆಗೆ ಕರೆತಂದಿದ್ದು ಈಗ ಇತಿಹಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ