ಗೆಲುವಿನ ಮೂಲಕ ರೋಹಿತ್-ದ್ರಾವಿಡ್ ಅಧ್ಯಾಯ ಶುರು

ಗುರುವಾರ, 18 ನವೆಂಬರ್ 2021 (08:40 IST)
ಜೈಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು 5 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ರೋಹಿತ್ ಪಡೆ ಶುಭಾರಂಭ ಮಾಡಿದೆ.

ರಾಹುಲ್ ದ್ರಾವಿಡ್ ಕೋಚ್ ಆಗಿ, ರೋಹಿತ್ ಶರ್ಮಾ ನಾಯಕರಾಗಿ ಮೊದಲ ಪಂದ್ಯದಲ್ಲೇ ಗೆಲುವು ಕಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಈ ಮೊತ್ತ ಬೆನ್ನತ್ತಿದ್ದ ಟೀಂ ಇಂಡಿಯಾಗೆ ರಾಹುಲ್-ರೋಹಿತ್ ಜೋಡಿ ಉತ್ತಮ ಆರಂಭ ಒದಗಿಸಿದರು. ಆದರೂ ರಾಹುಲ್ 15 ರನ್ ಗಳಿಸಿ ಔಟಾದರು. ಆದರೆ ನಾಯಕನ ಆಟವಾಡಿದ ರೋಹಿತ್ 36 ಎಸೆತಗಳಿಂದ 48 ರನ್ ಬಾರಿಸಿದರು. ರೋಹಿತ್ ಗೆ ಜೊತೆಯಾದ ಮುಂಬೈ ಇಂಡಿಯನ್ಸ್ ಜೋಡಿ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ ಅಬ್ಬರದ 62 ರನ್ ಗಳಿಸಿದರು. ಗೆಲುವಿನ ಹೊಸ್ತಿಲಲ್ಲಿ ಸೂರ್ಯಕುಮಾರ್ ಯಾದವ್ ಔಟಾದರು. ಆದರೆ ರಿಷಬ್ ಪಂತ್ ಅಜೇಯ 17 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಐಪಿಎಲ್ ಸೆನ್ಸೇಷನ್ ವೆಂಕಟೇಶ್ ಐಯರ್ ಕೊಡುಗೆ ಕೇವ 4 ರನ್. ಬಹಳ ದಿನಗಳ ನಂತರ ಕಣಕ್ಕಿಳಿದ ಶ್ರೇಯಸ್ ಐಯರ್ 5 ರನ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ