ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ಕೋಚ್ ಆಗಿ ಹೊಸ ಇನ್ನಿಂಗ್ಸ್

ಬುಧವಾರ, 1 ಏಪ್ರಿಲ್ 2015 (11:46 IST)
ಮುಂಬೈ: ಮಾಜಿ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಐಪಿಎಲ್ ಆವೃತ್ತಿ 8ಕ್ಕೆ ಮುಂಚೆ ವಾಂಖಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ತರಬೇತಿ ಆರಂಭಿಸಿದ್ದಾರೆ. 2003 ಮತ್ತು 2007ರಲ್ಲಿ ದೇಶಕ್ಕೆ ವಿಶ್ವಕಪ್ ವಿಜಯವನ್ನು ತಂದಿತ್ತ ಪಾಂಟಿಂಗ್ ತಮ್ಮ ಹೊಸ ಹೊಣೆಯನ್ನು ವಹಿಸಿಕೊಂಡಿದ್ದು,  ತವರು ಮೈದಾನದಲ್ಲಿ 2013ರ ಐಪಿಎಲ್ ಚಾಂಪಿಯನ್ನರು ತಮ್ಮ ಮೊದಲ ನೆಟ್ ಸೆಷನ್ ಕೈಗೊಂಡರು.

 ಮುಂಬೈ ಇಂಡಿಯನ್ಸ್ ಏಪ್ರಿಲ್ 8ರಂದು ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರಂಭದ ಪಂದ್ಯವಾಡಲಿದ್ದು, ಇನ್ನೊಂದೆರಡು ದಿನದಲ್ಲಿ ಮುಂಬೈ ಇಂಡಿಯನ್ಸ್‌ನ ಇನ್ನೂ ಕೆಲವು ಆಟಗಾರರು ಕಿರು ಶಿಬಿರವನ್ನು ಸೇರುವ ನಿರೀಕ್ಷೆಯಿದೆ. ಸದ್ಯಕ್ಕೆ ತರಬೇತಿ ಪಡೆದವರಲ್ಲಿ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಸೇರಿದ್ದು, ಕರ್ನಾಟಕ ರಣಜಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬೈ ನಾಯಕ ಆದಿತ್ಯ ತಾರೆ ಮತ್ತು ಗುಜರಾತ್ ರಣಜಿ ನಾಯಕ ಪಾರ್ಥಿವ್ ಪಟೇಲ್ ಕೂಡ ಜೊತೆಗೂಡಿದರು.  ಕೆಲವು ದಿನಗಳಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಶಿಬಿರವನ್ನು ಸೇರುವ ನಿರೀಕ್ಷೆಯಿದೆ.

 ಮುಂಬೈನ ಪೂರ್ಣ ತಂಡ 
ಭಾರತೀಯ ಆಟಗಾರರು: ರೋಹಿತ್ ಶರ್ಮಾ, ಅಭಿಮನ್ಯು ಮಿಥುನ್, ಆದಿತ್ಯ ತಾರೆ, ಅಂಬಾಟಿ ರಾಯುಡು, ಹರ್ಭಜನ್ ಸಿಂಗ್, ಜಸ್ಪ್ರೀತ್ ಬುಮ್ರಾ, ಪಾರ್ಥಿವ್ ಪಟೇಲ್, ಪ್ರಜ್ಞಾ ಓಜಾ, ಆರ್. ವಿನಯ್‌ಕುಮಾರ್, ಅಕ್ಷಯ್ ವಖಾರೆ, ಹಾರ್ದಿಕ್ ಪಾಂಡ್ಯಾ, ಜಗದೀಶ್ ಸುಚಿತ್, ನಿತಿಶ್ ರಾಣಾ, ಪವನ್ ಸುಯಾಲ್, ಸಿದ್ದೇಶ್ ಲಾಡ್, ಶ್ರೇಯಾಸ್ ಗೋಪಾಲ್, ಉಮುಕ್ತ್ ಚಂದ್ ಸೇರಿದ್ದಾರೆ.  
 
ವಿದೇಶಿ ಆಟಗಾರರು: ಆರಾನ್ ಫಿಂಚ್(ಆಸ್ಟ್ರೇಲಿಯಾ), ಏಡನ್ ಬ್ಲಿಜರ್ಡ್(ಆಸ್ಟ್ರೇಲಿಯಾ), ಕೋರಿ ಆಂಡರ್‌ಸನ್ (ನ್ಯೂಜಿಲೆಂಡ್), ಹ್ಯಾಜಲ್‌ವುಡ್(ಆಸ್ಟ್ರೇಲಿಯಾ), ಪೋಲಾರ್ಡ್ (ವೆಸ್ಟ್ ಇಂಡೀಸ್), ಲಸಿತ್ ಮಾಲಿಂಗಾ(ಶ್ರೀಲಂಕಾ), ಸಿಮ್ಮನ್ಸ್ (ವೆಸ್ಟ್ ಇಂಡೀಸ್), ಡಿ ಲಾಂಗೆ(ದ.ಆಫ್ರಿಕಾ) ಮತ್ತು ಮಿಚೆಲ್ ಮೆಕ್ ಲೀನಾಗನ್(ನ್ಯೂಜಿಲೆಂಡ್). 
 

ವೆಬ್ದುನಿಯಾವನ್ನು ಓದಿ