ಜಿಮ್ನಾಸ್ಟಿಕ್ಸ್ ವಾಲ್ಟ್ ಫೈನಲ್ಸ್‌‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ದೀಪಾ ಕರ್ಮಾಕರ್

ಸೋಮವಾರ, 8 ಆಗಸ್ಟ್ 2016 (11:24 IST)
ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ರಿಯೊ ಒಲಿಂಪಿಕ್ಸ್ ವೈಯಕ್ತಿಕ ವಾಲ್ಟ್ ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದು ವೈಯಕ್ತಿಕ ವಾಲ್ಟ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ  ಜಿಮ್ನಾಸ್ಟಿಕ್ ವಾಲ್ಟ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.
 
ತ್ರಿಪುರಾದ ಯುವತಿ ತನ್ನ ಅತ್ಯಂತ ಮೆಚ್ಚುಗೆ ಪಡೆದ ಪ್ರುಡುನೋವಾ ವಾಲ್ಟ್ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎರಡು ಪ್ರಯತ್ನಗಳ ಬಳಿಕ 14. 850 ಪಾಯಿಂಟ್‌ಗಳನ್ನು ಗಳಿಸಿದರು.
 
ಕೆನಡಾದ ಶಾಲನ್ ಓಲ್ಸನ್ 14.950 ಪಾಯಿಂಟ್ ಗಳಿಸಿದ ಬಳಿಕ ದೀಪಾ 8ನೇ ಸ್ಥಾನಕ್ಕೆ ಕುಸಿದರು. ಆದರೂ ಆಗಸ್ಟ್ 14ರಂದು ನಡೆಯುವ ಫೈನಲ್ಸ್‌ಗೆ ಸ್ಥಾನ ಪಡೆಯಲು ದೀಪಾ ಯಶಸ್ವಿಯಾಗಿದ್ದಾರೆ. ದೀಪಾ
ಮೂರು ಬಾರಿ ವಿಶ್ವ ಆಲ್ ರೌಂಡ್ ಚಾಂಪಿಯನ್ ಸೈಮೋನ್ ಬೈಲ್ಸ್ 16.050 ಸ್ಕೋರಿನೊಂದಿಗೆ ಪಟ್ಟಿಯಲ್ಲಿ ಅಗ್ರಸ್ತಾನ ಗಳಿಸಿದರು. ಉತ್ತರ ಕೊರಿಯಾದ ಜಾಂಗ್ ಉನ್ ಹಾಂಗ್ 15.683 ಪಾಯಿಂಟಿ‌ಗಳೊಂದಿಗೆ ಎರಡನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ