ಒಲಿಂಪಿಕ್ ಗ್ರಾಮದ ಅವ್ಯವಸ್ಥೆ, ಪೋಕ್‌ಮೊನ್ ಇಲ್ಲದೇ ಅಥ್ಲೀಟ್‌ಗಳಿಗೆ ನಿರಾಶೆ

ಸೋಮವಾರ, 1 ಆಗಸ್ಟ್ 2016 (15:25 IST)
ಕಟ್ಟಿಕೊಂಡ ಟಾಯ್ಲೆಟ್‌ಗಳು, ಕಳಪೆ ವೈರಿಂಗ್ ಸೌಲಭ್ಯಗಳು ಇವು ಬ್ರೆಜಿಲ್‌ನಲ್ಲಿ ರಿಯೋ ಒಲಿಂಪಿಕ್ ಗ್ರಾಮದ ಅಥ್ಲೀಟ್‌ಗಳು ಅನುಭವಿಸಬೇಕಾದ ಸ್ಥಿತಿಯಾಗಿದ್ದು, ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೋಕ್‌ಮೊನ್ ಗೋ ಗೇಮ್ಸ್‌ಗೆ ಕೂಡ ಅವಕಾಶ ಸಿಗದೇ ಅಥ್ಲೀಟ್‌ಗಳು ನಿರಾಶರಾಗಿದ್ದಾರೆ.
 
ಗೂಗಲ್ ಸ್ಪಿನ್‌ಆಫ್ ನಯಾಂಟಿಕ್ ಇಂಕ್ 30 ರಾಷ್ಟ್ರಗಳಲ್ಲಿ ಆರಂಭವಾಗಿದ್ದರೆ ಬ್ರೆಜಿಲ್‌ನಲ್ಲಿ ಇದು ಆರಂಭವಾಗಿಲ್ಲ. ಯಾವುದೇ ಪೋಕ್‌ಮೊನ್ ಗೋ ಪ್ರದೇಶದಲ್ಲಿ ಇಲ್ಲದೇ ಅಥ್ಲೀಟ್‌ಗಳಿಗೆ ಗ್ರಾಮದಲ್ಲಿ ಕಾಲಕಳೆಯವುದೇ ಕಷ್ಟವಾಗಿದೆ. 
 
ಬ್ರೆಜಿಲ್‌ನಲ್ಲಿ ಈ ಆಟವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆಂಬ ಕೋರಿಕೆಗೆ ನಿಯಾಂಟಿಕ್ ಯಾವುದೇ ಉತ್ತರ ನೀಡಿಲ್ಲ. ಜಗತ್ತಿನ ಅತೀ ದೊಡ್ಡ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಶುಕ್ರವಾರ ಆರಂಭವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ