ರಿಯೋ ಒಲಿಂಪಿಕ್ಸ್: ಕುಸ್ತಿಪಟು ನರಸಿಂಗ್ ಯಾದವ್ ತೀರ್ಪು ಇಂದು

ಸೋಮವಾರ, 1 ಆಗಸ್ಟ್ 2016 (14:06 IST)
ಕುಸ್ತಿಪಟು ನರಸಿಂಗ್ ಯಾದವ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನು ರಾಷ್ಟ್ರೀಯ ಮಾದಕವಸ್ತು ನಿಷೇಧ ಸಂಘಟನೆಯು(ನಾಡಾ) ಸೋಮವಾರ ನಿರ್ಧರಿಸಲಿದೆ. ಮಾದಕವಸ್ತು ನಿಷೇಧ ಹಗರಣ ಕುರಿತ ಅಂತಿಮ ತೀರ್ಪನ್ನು ನಾಡಾ ಜುಲೈ 30ಕ್ಕೆ ಮುಂದೂಡಿತ್ತು.

ವಿಚಾರಣೆಯು ಸುಮಾರು 8 ಗಂಟೆಗಳ ಸುದೀರ್ಘ ಕಾಲ ಮುಂದುವರಿದು ಸಮಿತಿಯು ಅನೇಕ ದಾಖಲೆಗಳನ್ನು ಅಧ್ಯಯನ ಮಾಡಿದ್ದು, ಸೋಮವಾರ ತೀರ್ಪು ನೀಡಲಿದೆ ಎಂದು ನಾಡಾ ಡಿಜಿ ನವೀನ್ ಅಗರವಾಲ್ ತಿಳಿಸಿದರು.
 
ಸಮಿತಿಯು ಇಂದು ಪುನಃ ಕುಳಿತಿದ್ದು ಇಡೀ ಪ್ರಕರಣದ ಮರುಪರಿಶೀಲನೆ ನಡೆಸಿತು. ಸಮಿತಿಯು ಸಂಜೆ 4ಗಂಟೆಗೆ ತೀರ್ಪನ್ನು ನೀಡಲಿದೆ ಎಂದು ಅಗರವಾಲ್ ಹೇಳಿದರು.
 
ಅನೇಕ ದಾಖಲೆಗಳನ್ನು ಅಧ್ಯಯನ ಮಾಡಿದ್ದು, ವಾದವಿವಾದಗಳು ಸುದೀರ್ಘಕಾಲ ಮುಂದುವರಿದಿದ್ದರಿಂದ ತೀರ್ಪು ನೀಡಲು ವಿಳಂಬವಾಯಿತು ಎಂದು ಅಗರವಾಲ್ ಹೇಳಿದರು.
 
ಪುರುಷರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ನರಸಿಂಗ್ ರಾವ್ ಅವರಿಗೆ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ