ಡೆಂಟಿಸ್ಟ್ ಬಳಿ ಹೋಗಿದ್ದೇ ರಿಷಬ್ ಪಂತ್ ಗೆ ಮುಳುವಾಯ್ತಾ?!

ಶುಕ್ರವಾರ, 16 ಜುಲೈ 2021 (12:44 IST)
ಲಂಡನ್: ಕೊರೋನಾ ಸೋಂಕಿಗೊಳಗಾಗಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಸೋಂಕು ತಗುಲಲು ನಿಜವಾದ ಕಾರಣವೇನೆಂಬುದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.


ಕೆಲವರು ಟೀಂ ಇಂಡಿಯಾ ವಿಕೆಟ್ ಕೀಪರ್ ಸುರಕ್ಷತೆ ನಿಯಮ ಮರೆತು ಯೂರೋ ಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ಹೋಗಿದ್ದೇ ತಪ್ಪಾಯಿತು ಎಂದು ದೂರಿದರೆ ಇನ್ನೊಂದು ವಿಚಾರ ಈಗ ಹರಿದಾಡುತ್ತಿದೆ.

ಜುಲೈ 5 ಮತ್ತು 6 ರಂದು ರಿಷಬ್ ದಂತ ವೈದ್ಯರ ಬಳಿ ಚಿಕಿತ್ಸೆಗೆ ಹೋಗಿದ್ದರು. ಬಹುಶಃ ಇದೇ ವೇಳೆ ಅವರಿಗೆ ಸೋಂಕು ತಗುಲಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ಜುಲೈ 7 ರಂದು ರಿಷಬ್ ಲಸಿಕೆ ಪಡೆದುಕೊಂಡಿದ್ದರು. ಸದ್ಯಕ್ಕೆ ಅವರೀಗ ಪ್ರತ್ಯೇಕ ವಾಸ ಅನುಭವಿಸುತ್ತಿದ್ದು, ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ತಂಡ ಕೂಡಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ